Connect with us

    LATEST NEWS

    ಮಂಗಳೂರು ವಿಮಾನ ನಿಲ್ದಾಣದಲ್ಲಿ 25 ಲಕ್ಷ ಮೌಲ್ಯದ ಅಕ್ರಮ ಚಿನ್ನ ವಶಕ್ಕೆ

    ಮಂಗಳೂರು ವಿಮಾನ ನಿಲ್ದಾಣದಲ್ಲಿ 25 ಲಕ್ಷ ಮೌಲ್ಯದ ಅಕ್ರಮ ಚಿನ್ನ ವಶಕ್ಕೆ

    ಮಂಗಳೂರು ಫೆಬ್ರವರಿ 11: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 25 ಲಕ್ಷ ಮೌಲ್ಯದ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.ಬಂಧಿತನ್ನು ಕಾಸರಗೋಡಿನ ಸೈಪುದ್ದೀನ್ ತೆಕ್ಕೀಲ್ ಫಝೇವಾ ಲಾಫಿಲ್ ಎಂದು ಗುರುತಿಸಲಾಗಿದೆ.

    ಇಂದು ಮುಂಜಾನೆ 4.30 ಕ್ಕೆ ದುಬೈ ನಿಂದ ಮಂಗಳೂರಿಗೆ ಏರ್‌ ಇಂಡಿಯಾ ವಿಮಾನದಿಂದ ಆಗಸಿದ ಕಾಸರಗೋಡು ಮೂಲದ ಪ್ರಯಾಣಿಕನೋರ್ವನನ್ನು ಸಂಶಯದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವ್ಯಕ್ತಿಯ ದೇಹದೊಳಗೆ ಚಿನ್ನವನ್ನು ಇರಿಸಿ ಸಾಗಾಟ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಿದ್ದಾರೆ. ಪ್ರಯಾಣಿಕನ್ನು ವಶಕ್ಕೆ ಪಡೆದ ಕಸ್ಟಂ ಅಧಿಕಾರಿಗಳು ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

    ಮತ್ತೊಂದು ಪ್ರಕರಣದಲ್ಲಿ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ನಿಷೇಧಿತ ಗುಡಂಗ್ ಗರಂ, ಡುನ್ಹಿಲ್ ಸಿಗರೇಟ್‌ ಗಳ 120 ಕರ್ಟಲ್ಸ್‌ ವಶಕ್ಕೆ ಪಡೆದಿದ್ದಾರೆ. ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿ ಆಗಮಿಸಿದ ವ್ಯಕ್ತಿಯೋರ್ವನಲ್ಲಿ ಈ ಸಿಗರೇಟ್‌ ಬಾಕ್ಸ್‌ಗಳಿದ್ದುವು. ಕ್ಯಾಲಿಕಟ್ ನಿಂದ ಇದನ್ನು ತರಿಸಿರುವ ಶಂಕೆ ವ್ಯಕ್ಯವಾಗಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ ಎಂದು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply