LATEST NEWS
ದುಬೈ ಬಿಸಿಲಿಗೆ ಕುಂದಾಪುರದ ಯುವಕ ಸಾವು
ಉಡುಪಿ, ಸೆಪ್ಟೆಂಬರ್ 16: ದುಬೈನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕುಂದಾಪುರದ ಯುವಕನೊಬ್ಬ ಸಾವನಪ್ಪಿದ ಘಟನೆ ನಡೆದಿದೆ.
ಮೃತರನ್ನು ಕುಂದಾಪುರದ ವಿಠಲವಾಡಿ ನಿವಾಸಿ ಯುವಕ ಶಾನ್ ಡಿಸೋಜಾ (19 ವರ್ಷ) ಎಂದು ಗುರುತಿಸಲಾಗಿದೆ. ದುಬೈಯಿಂದ ಸುಮಾರು 115 ಕಿ.ಮೀ. ದೂರದಲ್ಲಿರುವ ರಾಸ್ ಅಲ್ ಖೈಮಾದ ಸೈಂಟ್ ಮೆರೀಸ್ ಚರ್ಚ್ ಬಳಿ ಮನೆಯಲ್ಲಿ ವಾಸವಾಗಿದ್ದರು. ಖಾಸಗಿ ಕಂಪೆನಿಯಲ್ಲಿ ಮ್ಯಾನೆಜರ್ ಆಗಿದ್ದ ಶಾನ್, ಅಲ್ಲಿಯೇ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದರು. ಬಿಸಿಲಿನ ತಾಪ ಮೂರ್ಚೆ ಹೋಗಿ ಆರ್‌ಎಕೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಮೃತರಾಗಿದ್ದಾರೆ. ಯುವಕ ಶಾನ್ ಡಿಸೋಜಾ ಅವರಿಗೆ ತಂದೆ, ತಾಯಿ ಮತ್ತು ಇಬ್ಬರು ಸಹೋದರರು ಇದ್ದಾರೆ.
You must be logged in to post a comment Login