BANTWAL
ಬಿಸಿ ರೋಡ್ – ಪೊಲೀಸರ ನಿರ್ಬಂಧದ ನಡುವೆ ಮುಸ್ಲಿಂ ಯುವಕರಿಂದ ಬೈಕ್ ರಾಲಿ – ಹಿಂದೂ ಸಂಘಟನೆಗಳ ವಿರೋಧ
ಬಂಟ್ವಾಳ ಸೆಪ್ಟೆಂಬರ್ 16: ಬಿಸಿ ರೋಡ್ ಪ್ರತಿಭಟನೆ ನಡುವೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದ ಪೊಲೀಸರಿಗೆ ಇದೀಗ ಮತ್ತೊಂದು ತಲೆನೋವು ಪ್ರಾರಂಭವಾಗಿದ್ದು, ಪೊಲೀಸರ ನಿರ್ಬಂಧದ ನಡುವೆ ಕೆಲವು ಮುಸ್ಲಿಂ ಯುವಕರು ರಸ್ತೆ ಬ್ಲಾಕ್ ಮಾಡಿ ಬೈಕ್ ರಾಲಿ ನಡೆಸಿದ್ದಾರೆ. ಹಿಂದೂ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಸಿ ರೋಡ್ ನಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ನಡುವೆಯೇ ಮುಸ್ಲಿಂ ಯುವಕರ ಪ್ರಚೋದನಕಾರಿ ಯಾಗಿ ಬಿಸಿ ರೋಡ್ ಪೇಟೆಯಲ್ಲಿ ಬೈಕ್ ಸ್ಟಂಟ್ ನಡೆಸಿದ್ದಾರೆ. ಬಿಗಿ ಪೋಲೀಸ್ ಬಂದೋಬಸ್ತ್ ನಡುವೆಯೂ ಮುಸ್ಲಿ ಯುವಕರ ಬೈಕ್ ರಾಲಿ ನಡೆಸಿದ್ದು. ಹಿಂದೂ ಸಂಘಟನೆಗಳ ವಿರೋಧ ವ್ಯಕ್ತಪಡಿಸಿದ್ದಾರೆ. ಬೈಕ್ ರಾಲಿ ವಿರುದ್ದ ಹಿಂದೂ ಕಾರ್ಯಕರ್ತರು ರಸ್ತೆ ತಡೆ ನಡೆಸಲು ಮುಂದಾಗಿದ್ದು ಪೊಲೀಸರು ತಡೆಯೊಡ್ಡಿದ್ದಾರೆ. ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಮತ್ತು ಪೋಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
You must be logged in to post a comment Login