FILM
ಎರಡನೇ ಮದುವೆ ಸಂತಸದಲ್ಲಿ ನಟ ನಟಿ – ಹಸೆಮಣೆ ಏರಿದ ಅದಿತಿ ರಾವ್ ಮತ್ತು ಸಿದ್ದಾರ್ಥ
ಚೆನ್ನೈ ಸೆಪ್ಟೆಂಬರ್ 16: ತೆಲುಗು ಚಿತ್ರನಟ ಸಿದ್ದಾರ್ಥ ಮತ್ತು ಬಾಲಿವುಡ್ ನಟಿ ಅದಿತಿ ಹೈದರಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಇಬ್ಬರಿಗೂ ಎರಡನೇ ಮದುವೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮದುವೆ ಪೋಟೋ ಹಂಚಿಕೊಂಡಿರುವ ಜೋಡಿ ಅಭಿಮಾನಿಗಳಿಗೆ ಸರ್ಪೈಸ್ ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಸಿದ್ದಾರ್ಥ್ ಮತ್ತು ಅದಿತಿ ರಾವ್ ಹೈದರಿ ಅವರು ರಿಲೇಷನ್ಶಿಪ್ನಲ್ಲಿ ಇದ್ದರು. ಈಗ ದಾಂಪತ್ಯ ಜೀವನಕ್ಕೆ ಪ್ರವೇಶ ಪಡೆದಿದ್ದಾರೆ. ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಅದಿತಿ ರಾವ್ ಹೈದರಿ ಮತ್ತು ಸಿದ್ದಾರ್ಥ್ ಅವರ ಮದುವೆ ವಿಷಯ ತಿಳಿದು ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.
ಅದಿತಿ ರಾವ್ ಹೈದರಿ ಮತ್ತು ಸಿದ್ದಾರ್ಥ್ ಇಬ್ಬರಿಗೂ ಇದು ಎರಡನೇ ಮದುವೆ. ಮೊದಲ ಪತ್ನಿ ಮೇಘನಾಗೆ ಸಿದ್ದಾರ್ಥ್ ಅವರು 2007ರಲ್ಲಿ ವಿಚ್ಛೇದನ ನೀಡಿದ್ದರು. ಹಾಗೆಯೇ ಅದಿತಿ ರಾವ್ ಅವರು ಮೊದಲ ಪತಿ ಸತ್ಯದೀಪ್ ಮಿಶ್ರಾಗೆ 2013ರಲ್ಲಿ ಡಿವೋರ್ಸ್ ನೀಡಿದ್ದರು. ಆ ಬಳಿಕ ಅದಿತಿ ರಾವ್ ಅವರಿಗೆ ಸಿದ್ದಾರ್ಥ್ ಜೊತೆ ಪ್ರೀತಿ ಚಿಗುರಿತ್ತು. ಈಗ ಅವರಿಬ್ಬರು ಸತಿ-ಪತಿ ಆಗಿದ್ದಾರೆ.
You must be logged in to post a comment Login