BANTWAL
ಬಂಟ್ವಾಳ – ಒಂದು ಕಡೆ ಟೆನ್ಶನ್… ಇನ್ನೊಂದು ಕಡೆ ಭಾವೈಕ್ಯತೆ
ಮಂಗಳೂರು, ಸೆಪ್ಟೆಂಬರ್ 16: ಬಂಟ್ವಾಳದಲ್ಲಿ ಒಂದು ಕಡೆ ಶಾಂತಿ ಕದಡುವ ಸ್ಥಿತಿಯಲ್ಲಿದ್ದರೆ ಇನ್ನೊಂದು ಕಡೆ ಕೋಮು ಸೌಹಾರ್ದತೆಗೆ ಸಾಕ್ಷಿಯಾಗುವಂತ ಘಟನೆ ನಡೆದಿದೆ.
ಬಂಟ್ವಾಳದಲ್ಲಿ ಸವಾಲಿನ ಆಡಿಯೋಗಳ ಬಳಿಕ ಒಂದು ರೀತಿ ಅಶಾಂತಿ ಪರಿಸ್ಥಿತಿ ನಿರ್ಮಾಣವಾಗಿದೆ. ಮುಸ್ಲಿಂ ನಾಯಕರೊಬ್ಬರ ಹೇಳಿಕೆಗೆ ಸವಾಲಾಗಿ ಹಿಂದೂ ಸಂಘಟನೆಗಳ ನಾಯಕರು ಪ್ರತಿಭಟನೆ ನಡೆಸಿದ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಪೊಲೀಸರು ಪರಿಸ್ಥಿತಿ ಕೈತಪ್ಪದೆ ತಡೆದು, ಸ್ಥಿತಿ ಶಾಂತಗೊಳಿಸಿದ್ದಾರೆ. ಈ ನಡುವೆ ಮತ್ತೊಂದು ಕಡೆ ಇದೇ ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್ ಮತ್ತು ಕೊಡಾಜೆಯಲ್ಲಿ ಮುಸ್ಲಿಂ ಬಾಂಧವರಿಗೆ ಹಿಂದೂಗಳು ಸಿಹಿ, ಐಸ್ಕ್ರೀಂ, ನೀರಿನ ಬಾಟಲಿ ವಿತರಣೆ ಮಾಡಿ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಮಾಣಿ ಜಂಕ್ಷನ್ನಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಕೇಸರಿ ಶಾಲು ಹಾಕಿಕೊಂಡು ಹಿಂದೂ ಯುವಕರು ಮುಸ್ಲಿಂ ಮುಖಂಡರು ಮತ್ತು ಮಕ್ಕಳಿಗೆ ಸಿಹಿ, ಐಸ್ಕ್ರೀಂ, ನೀರಿನ ಬಾಟಲ್ ವಿತರಣೆ ಮಾಡಿದರು. ಈ ಮಾಣಿ ಜಂಕ್ಷನ್ನಲ್ಲಿ ಬಿಸಿ ರೋಡ್ ಕೇವಲ 20 ಕಿಮೀ ದೂರದಲ್ಲಿದೆ.
ಕೊಡಾಜೆಯಲ್ಲೂ ಕೂಡ ಹಿಂದೂಗಳು ಈದ್ ಮಿಲಾದ್ ಮೆರವಣಿಗೆಯಲ್ಲಿದ್ದ ಮುಸ್ಲಿಮರಿಗೆ ಸಿಹಿ ಹಂಚಿದರು. ಜುಮ್ಮಾ ಮಸೀದಿಯಿಂದ ಬಂದಿದ್ದ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಬಾಂಧವರಿಗೆ ಹಿಂದೂಗಳು ಸ್ವೀಟ್ ಬಾಕ್ಸ್ ವಿತರಿಸಿ ಹಬ್ಬದ ಶುಭಾಶಯ ಕೋರಿದರು.
You must be logged in to post a comment Login