LATEST NEWS
ಆ್ಯಪಲ್ ಫೋನ್ ಸಮಸ್ಯೆ ವಿರುದ್ದ ಸೆಪ್ಟೆಂಬರ್ 17 ರಂದು ಪ್ರತಿಭಟನೆ
ಮಂಗಳೂರು, ಸೆಪ್ಟೆಂಬರ್ 16: ಆ್ಯಪಲ್ ಪೋನ್ ನಲ್ಲಿರುವ ಸಮಸ್ಯೆಗಳ ವಿರುದ್ದ ಇದೀಗ ಗ್ರಾಹಕರು ಕಂಗಾಲಾಗಿದ್ದು, ಆ್ಯಪಲ್ ಸರ್ವಿಸ್ ಸೆಂಟರ್ ನಲ್ಲಿ ಗ್ರಾಹಕರಿಗೆ ನೀಡುತ್ತಿರುವ ಕಿರುಕುಳ ವಿರೋಧಿಸಿ ನಗರದಲ್ಲಿರುವ ಆ್ಯಪಲ್ ಮ್ಯಾಪಲ್ ಸರ್ವಿಸ್ ಸೆಂಟರ್ ವಿರುದ್ಧ ಸೆ.17ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ದ.ಕ. ಮತ್ತು ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್ ತಿಳಿಸಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್ ನ ಸುದ್ದಿ ಮತ್ತು ಮಾಧ್ಯಮ ನಿರ್ವಾಹಕ ವಿವೇಕ್ ಜಿ. ಸುವರ್ಣ, ಅಂದು ಪೂರ್ವಾಹ್ನ 11 ಗಂಟೆಗ ಅಂಬೇಡ್ಕರ್ (ಜ್ಯೋತಿ) ಸರ್ಕಲ್ ನಿಂದ ಬೆಳಗ್ಗೆ ಆ್ಯಪಲ್ ಸರ್ವಿಸ್ ಸೆಂಟರ್ ಮ್ಯಾಪಲ್ ನ ಮೂಲಕ ಕ್ಲಾಕ್ ಟವರ್ ವರಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.
ಇದೇ ಮೊದಲ ಬಾರಿಗೆ ಸ್ಥಳೀಯ ರೀಟೇಲರ್ ಗಳು ತಮ್ಮ ಗ್ರಾಹಕರಿಗೋಸ್ಕರ ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ಇದರಲ್ಲಿ ಹಲವು ನೊಂದ ಗ್ರಾಹಕರು ಪಾಲ್ಗೊಳ್ಳುತ್ತಿದ್ದಾರೆ ಹಾಗೂ ಮತ್ತು ಹಲವು ಸಮಸ್ಯೆಗೊಳಗಾದ ಗ್ರಾಹಕರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿ ಬೆಂಬಲ ನೀಡಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.
ಇದನ್ನೂ ಓದಿ…
ಮಂಗಳೂರಿನಲ್ಲಿ ‘apple iphone’ ವಿರುದ್ದ ರೊಚ್ಚಿಗೆದ್ದು ಬೀದಿಗಿಳಿದ ಗ್ರಾಹಕರು..!
You must be logged in to post a comment Login