Connect with us

    BANTWAL

    ಬಂಟ್ವಾಳ : ಪುಳಿಂಚ ಸೇವಾ ಪ್ರತಿಷ್ಟಾನದ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ಹಾಗೂ ನೇತ್ರ ಶಿಬಿರ ಕಾರ್ಯಕ್ರಮ, 550 ಕ್ಕಿಂತಲೂ ಅಧಿಕ ಜನರಿಗೆ ಪ್ರಯೋಜನ

    ಬಂಟ್ವಾಳ :  ಪುಳಿಂಚ ಸೇವಾ ಪ್ರತಿಷ್ಠಾನ (ರಿ.)ಮಂಗಳೂರು, ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ (ರಿ.)ಶಂಭೂರ್, ಜನಕಲ್ಯಾಣ ಟ್ರಸ್ಟ್ (ರಿ.)ನಾಟಿ ನರಿಕೊಂಬು ಇದರ ಆಶ್ರಯದಲ್ಲಿ
    ರೋಟರಿ ಕ್ಲಬ್ ಪುತ್ತೂರು, ಪ್ರಸಾದ್ ನೇತ್ರಾಲಯಾ ಸೂಪರ್ ಸ್ಪೆಷಲಿಟಿ ಕಣ್ಣಿನ ಆಸ್ಪತ್ರೆ ಪುತ್ತೂರು, ಎ ಜೆ ಆಸ್ಪತ್ರೆ ಮಂಗಳೂರು, ಸಮುದಾಯ ವಿಭಾಗ ಪಾಣೆ ಮಂಗಳೂರು, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂದತ್ವ ವಿಭಾಗ ಮಂಗಳೂರು, ಡಾ. ಪಿ ದಯಾನಂದ ಪೈ ಮತ್ತು ಪಿ ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ.)ಸೆಂಚುರಿ ಗ್ರೂಪ್ಸ್ ಬೆಂಗಳೂರು ಇವುಗಳ ಸಹಕಾರೋದೊಂದಿಗೆ  ಬಂಟ್ವಾಳ ತಾಲೂಕಿನ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ಶಂಭೂರ್ ಇಲ್ಲಿ  ಉಚಿತ ಅರೋಗ್ಯ ಹಾಗೂ ನೇತ್ರ ತಪಾಸಣಾ ಮತ್ತು ಚಿಕಿತ್ಸಾ  ಶಿಬಿರ  ಆಯೋಜಿಸಲಾಗಿತ್ತು.

    ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ  ಮನುಷ್ಯನಿಗೆ ಅರೋಗ್ಯಕಿಂತ ದೊಡ್ಡ ಸಂಪತು ಬೇರೊಂದಿಲ್ಲ, ಒಬ್ಬ ವ್ಯಕ್ತಿ ಎಷ್ಟೇ ದೊಡ್ಡ ಶ್ರೀಮಂತ ನಾಗಿದ್ರು ಅವನ ಅರೋಗ್ಯ ಸರಿ ಇಲ್ಲದಿದ್ರೆ  ನೆಮ್ಮದಿ ಇರಲ್ಲ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನಸಾಮಾನ್ಯರ ಅರೋಗ್ಯ ಕಾಪಾಡುವ ದೃಷ್ಟಿಯಿಂದ  ಪುಳಿಂಚ ಸೇವಾ ಪ್ರತಿಷ್ಟನ ಕಾರ್ಯ ಅಭಿನಂದನೆದಾಯಕವಾಗಿದ್ದು ದೇವರು ಮೆಚ್ಚುವಂತ ಕಾರ್ಯವಾಗಿದೆ ಎಂದರು’

    ವೇದಿಕೆಯಲ್ಲಿ ಜಗನಾಥ್ ಬಂಗೇರ ನಿರ್ಮಲ್, ಎ ಜೆ ಆಸ್ಪತ್ರೆ ಯ ಡಾಕ್ಟರ್ ವಾಮನ್ ನಾಯಕ್, ಡಾ. ಹಂಸ. ಪ್ರಸಾದ್ ನೇತ್ರಲಾಯದ ಡಾ. ತನ್ವಿ ಶಂಭೂರ್ ಸರಕಾರಿ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಹೇಮಚಂದ್ರ ಶಂಭೂರ್   ಬಂಡಾರದ ಮನೆ, ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ಶಂಭೂರ್ ಇದರ ಅಧ್ಯಕ್ಷ ಆನಂದ ಅಡ್ಡದಪಾದೆ , ಪುಳಿಂಚ ಸೇವಾ ಪ್ರತಿಷ್ಠಾನದ ಕೋಶಾಧಿಕಾರಿ  ಪ್ರತಿಭಾ ಎಮ್ ಎಸ್. ಮೊದಲಾದವರು ಉಪಸ್ಥಿತರಿದ್ದರು. ಪುಳಿಂಚ ಸೇವಾ ಪ್ರತಿಷ್ಟನ(ರಿ.)ಮಂಗಳೂರು ನ ಅಧ್ಯಕ್ಷ ವಕೀಲ ಶ್ರೀಧರ ಶೆಟ್ಟಿ ಪುಳಿಂಚ ಸ್ವಾಗತಿಸಿ, ಕಮಲಾಕ್ಷ ಶಂಬೂರ್ ವಂದಿಸಿ, ಜಗದೀಶ್ ಕಾರ್ಯಕ್ರಮ ನೀರೂಪಿಸಿದರು.

    ಕಾರ್ಯಕ್ರಮ ದಲ್ಲಿ ಸಾಮಾನ್ಯ ರೋಗ, ಕಣ್ಣಿನ ,ಚರ್ಮ ರೋಗ , ಮೂಳೆ ರೋಗ , ಕಿವಿ, ಮೂಗು, ಗಂಟಲು,  ಸ್ತ್ರೀ ರೋಗ , ಮಕ್ಕಳ , ದಂತ , ಬಿ ಪಿ, ಶುಗರ್ , ಇ ಸಿ ಜಿ  ಮೊದಲಾದ ಉಚಿತ ತಪಾಸಣೆ ಮಾಡಲಾಯಿತು.

    ಆರೋಗ್ಯ ಹಾಗೂ ನೇತ್ರ ಶಿಬಿರ ಕಾರ್ಯಕ್ರಮದಲ್ಲಿ ಐನೂರ ಐವತ್ತಕ್ಕಿಂತಲೂ ಹೆಚ್ಚು ಸಾರ್ವಜನಿಕರು ಪ್ರಯೋಜನ ಪಡೆದು ಕೊಂಡರು. ಅದರಲ್ಲಿ ಒಟ್ಟು 174 ಕನ್ನಡಕ, 23 ಕಣ್ಣಿನ ಪೊರೆ ಚಿಕಿತ್ಸೆಗೆ , ಡೆಂಟಲ್ ಚಿಕಿತ್ಸೆಗೆ 64 ಜನ ಹಾಗೂ ಉಳಿದವರು ಇತರ ಚಿಕಿತ್ಸೆಯ ಪ್ರಯೋಜನ ಪಡೆದು ಕೊಂಡರು.

    Share Information
    Advertisement
    Click to comment

    You must be logged in to post a comment Login

    Leave a Reply