Connect with us

    LATEST NEWS

    ವಿಜ್ಞಾನ ಲೋಕಕ್ಕೆ ಹಿನ್ನಡೆ: ಹಂದಿ ಹೃದಯ ಕಸಿ ಮಾಡಿಕೊಂಡಿದ್ದ ವ್ಯಕ್ತಿ 40 ದಿನಗಳ ಬಳಿಕ ಮೃತ್ಯು..!

    ವಾಷಿಂಗ್ಟನ್ : ವೈಜ್ಞಾನಿಕ ಲೋಕದಲ್ಲಿ ಭಾರಿ ಹಿನ್ನಡೆಯಾಗಿದ್ದು ವಿಶ್ವದಲ್ಲೇ 2ನೇ ಬಾರಿಗೆ ಪ್ರಾಯೋಗಿಕವಾಗಿ ಹಂದಿಯ ಹೃದಯದ(Pig heart) ಕಸಿಗೊಳಗಾಗಿದ್ದ ಅಮೆರಿಕದ  ವ್ಯಕ್ತಿ ಸಾವನ್ನಪ್ಪಿದ್ದಾರೆ.

    ಲಾರೆನ್ಸ್ ಫೌಸೆಟ್ (58) ಹಂದಿ ಹೃದಯ(Pig heart) ಕಸಿಗೊಳಗಾದ 40 ದಿನಗಳ ಬಳಿಕ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಸೆಪ್ಟೆಂಬರ್ 20ರಂದು ಹೃದಯಾಘಾತದಿಂದ ಸಾಯುವ ಹಂತಕ್ಕೆ ತಲುಪಿದ್ದ ಫೌಸೆಟ್‌’ಗೆ ಕೊನೆಯ ಆಯ್ಕೆಯಾಗಿ ಹಂದಿಯ ಹೃದಯ(Pig heart) ವನ್ನು ಕಸಿ ಮಾಡಲಾಗಿತ್ತು. ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಪ್ರಕಾರ, ಫೌಸೆಟ್‌ಗೆ ಹೃದಯ ಕಸಿ ಮಾಡಿದ ಬಳಿಕ 1 ತಿಂಗಳು ಆರೋಗ್ಯವಾಗಿಯೇ ಇದ್ದರು.

    ಆದರೆ ನಂತರದ ದಿನಗಳಲ್ಲಿ ಹೃದಯ ಸರಿಯಾಗಿ ಸ್ಪಂದಿಸದ ಲಕ್ಷಣಗಳು ತೋರಿಸಲಾರಂಭಿಸಿದೆ. ಶಸ್ತ್ರಚಿಕಿತ್ಸೆಯ ನಂತರ ಅವರು ಸುಮಾರು 6 ವಾರಗಳ ಕಾಲ ಬದುಕಿದ್ದರು. ಸೋಮವಾರ ಫೌಸೆಟ್  ಸಾವನ್ನಪ್ಪಿದ್ದಾರೆ ಎಂದು ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯ ಹೇಳಿದೆ.

    Share Information
    Advertisement
    Click to comment

    You must be logged in to post a comment Login

    Leave a Reply