Connect with us

    FILM

    ಗುಡ್ ನ್ಯೂಸ್ ಕೊಟ್ಟ ಕಿರುತೆರೆ ಜೋಡಿ ಲಕ್ಷ್ಮಿ ಬಾರಮ್ಮ ಖ್ಯಾತಿಯ ಕವಿತಾಗೌಡ ಚಂದನ್ ದಂಪತಿ

    ಬೆಂಗಳೂರು ಮೇ 05: ಕಿರುತೆರೆಯ ಸೂಪರ್ ಹಿಟ್ ಜೋಡಿ ಲಕ್ಷ್ಮೀ ಬಾರಮ್ಮ ಸಿರಿಯಲ್ ಮೂಲಕ ಮನೆ ಮಾತಾಗಿರುವ ದಂಪತಿ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟಿ ಕವಿತಾ ತಾಯಿಯಾಗ್ತಿದ್ದಾರೆ. ಪ್ರೆಗ್ನೆನ್ಸಿ ಬಗ್ಗೆ ಚಂದನ್ ದಂಪತಿ ಅನೌನ್ಸ್ ಮಾಡಿದ್ದಾರೆ.


    ಇಮೋಜಿ ಒಳಗೆ ಸ್ಕ್ಯಾನಿಂಗ್ ಫೋಟೋ ಹಾಕಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರೋದಾಗಿ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಈ ಸುದ್ದಿ ಹೇಳುತ್ತಿದ್ದಂತೆ ಸ್ಯಾಂಡಲ್‌ವುಡ್ ಕಲಾವಿದರು, ಆಪ್ತರು, ಅಭಿಮಾನಿಗಳು ಶುಭಕೋರಿದ್ದಾರೆ.
    ಕೆಲ ತಿಂಗಳುಗಳಿಂದ ಕವಿತಾ ಗೌಡ ಅವರು ಉದ್ಯಮದ ಕಡೆಗೆ ಮುಖ ಮಾಡಿದ್ದರು. ಪತಿಯ ಜೊತೆಗೆ ಅವರು ಒಂದಾದ ಮೇಲೆ ಒಂದರಂತೆ ಹೋಟೆಲ್ ಬ್ರ್ಯಾಂಚ್ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಮೇಕಪ್ ಸ್ಟುಡಿಯೋವನ್ನು ಕೂಡ ಆರಂಭಿಸಿದ್ದರು. ಇತ್ತೀಚೆಗೆ ನಮ್ರತಾ ಗೌಡ ಅವರ ಜನ್ಮದಿನಕ್ಕೆ ಕವಿತಾ ಗೌಡ ಭಾಗಿಯಾಗಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply