Connect with us

    KARNATAKA

    ಪ್ರಜ್ವಲ್ ರೇವಣ್ಣ ಗೆದ್ದರೆ ಕ್ರಮಕೈಗೊಳ್ಳುತ್ತೇವೆ – ಆರ್. ಅಶೋಕ್

    ಬೆಂಗಳೂರು ಮೇ 05 : ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ಅವರ ಪ್ರಕರಣದಿಂದ ಮುಜುಗರ ಅನುಭವಿಸುತ್ತಿರುವ ಬಿಜೆಪಿ ಇದೀಗ ಖಡಕ್ ಆಗಿ ಉತ್ತರ ನೀಡಲು ಆರಂಭಿಸಿದ್ದು, ಪ್ರಜ್ವಲ್ ರೇವಣ್ಣ ಈಗ ಹಾಸನದಿಂದ ಗೆದ್ದರೆ ನಾವು ಅವರ ವಿರುದ್ದ ಕ್ರಮಕೈಗೊಳ್ಳುತ್ತೇವೆ ಎಂದು  ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಈ ಮೂಲಕ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪ್ರಶ್ನಾರ್ಥಕ ಚಿಹ್ನೆ ಅಡಿ ಬಂದಿದೆ.


    ಇಲ್ಲಿನ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರೇ ಪ್ರಜ್ವಲ್ ರೇವಣ್ಣ ಅವರನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿದ್ದು, ಸಿದ್ದರಾಮಯ್ಯ ಹೇಳಿದಂತೆ ಪ್ರಜ್ವಲ್ ವಿಜನ್ ತೋರಿಸಿದ್ದಾರೆ. ಪ್ರಜ್ವಲ್ ಈಗ ಗೆದ್ದರೆ ನಾವು ಎನ್‌ಡಿಎ ವತಿಯಿಂದ ಅಮಾನತು ಮಾಡ್ತೀವಿ ಎಂದು ಅಶೋಕ್ ಹೇಳಿದ್ದಾರೆ.

    ಇದೇ ವೇಳೆ ರೇವಣ್ಣ ಬಂಧನ ವಿಚಾರ ಪ್ರಸ್ತಾಪಿಸಿದ ಅಶೋಕ್, ಹೆಚ್.ಡಿ ರೇವಣ್ಣ ಬಂಧನ ಸರಿಯಾಗಿದೆ. ಅವರ ಬಂಧನ ಮಾಡಿದ ಪೊಲೀಸರ ಕಾರ್ಯ ಶ್ಲಾಘಿಸುತ್ತೇನೆ. ಪೊಲೀಸರು ರೇವಣ್ಣ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
    ಕುಮಾರಸ್ವಾಮಿ ಮತ್ತು ಅಮಿತ್ ಶಾ ಸಹ ಈ ಬಗ್ಗೆ ಮಾತನಾಡಿದ್ದಾರೆ, ಏನು ಮಾತಾಡಿದ್ದಾರೋ ಗೊತ್ತಿಲ್ಲ. ಮೈತ್ರಿ ಕೇಂದ್ರದ ಮಟ್ಟದಲ್ಲಿ ಆಗಿರೋದು. ಮೈತ್ರಿ ಮುಂದುವರಿಸುವ ಬಗ್ಗೆ ವರಿಷ್ಠರೇ ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply