Connect with us

    LATEST NEWS

    ಹೃದಯಾಘಾತಕ್ಕೆ ಚಿಕಿತ್ಸೆ ಪಡೆದು ಮರಳಿ ಬಂದ ವಿಲೇಜ್ ಕುಕ್ಕಿಂಗ್ ಚಾನೆಲ್ ಅಜ್ಜ ಪೆರಿಯತಂಬಿ

    ಚೆನ್ನೈ ಮೇ 05: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ದೇಶದ ಪ್ರಖ್ಯಾತ ಯೂಟ್ಯೂಬ್ ಚಾನೆಲ್ ವಿಲೇಜ್ ಕುಕ್ಕಿಂಗ್ (Village Cooking Channel )ಚಾನೆಲ್ ನ ಅಜ್ಜ ಎಂ ಪೆರಿಯತಂಬಿ ಅವರು ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿದ್ದು, ಮತ್ತೆ ಯೂಟ್ಯೂಬ್ ವಿಡಿಯೋಗೆ ಮರಳಿ ಬಂದಿದ್ದಾರೆ.


    ಒಂದು ತಿಂಗಳ ಹಿಂದೆ ಹೃದಯಾಘಾತದಿಂದಾಗಿ ಪೆರಿಯತಂಬಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಪೆರಿಯತಂಬಿ ಅವರ ಮೊಮ್ಮಗ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಪೆರಿಯತಂಬಿ ಅವರು ಗುಣಮುಖರಾಗಿದ್ದು ,ಈ ಬಾರಿ ಪೋಸ್ಟ್ ಆಗಿರುವ ಯೂಟ್ಯೂಬ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.


    ಈ ವಿಡಿಯೋದಲ್ಲಿ ಮಾತನಾಡಿದ ಅವರು ನಾನು ಆಸ್ಪತ್ರೆಗೆ ದಾಖಲಾದ ವೇಳೆ ಅಭಿಮಾನಿಗಳು ನನಗಾಗಿ ಪ್ರಾರ್ಥಿಸಿದ್ದರು, ಅದಕ್ಕಾನಿ ನಾನು ಚಿರಋುಣಿ ಎಂದರು. ಈ ವೇಳೆ ರಾಹುಲ್ ಗಾಂಧಿ ಅವರು ಕರೆ ಮಾಡಿ ನನ್ನ ಆರೋಗ್ಯವನ್ನು ವಿಚಾರಿಸಿದ್ದರು. ನನಗೂ ಅತೀ ಶೀಘ್ರದಲ್ಲಿ ಗುಣಮುಖನಾಗಿ ಮತ್ತೆ ನಿಮ್ಮ ಜೊತೆ ಕಾಣಿಸಿಕೊಳ್ಳಬೇಕು ಎಂಬ ಆಸೆ ಇತ್ತು, ದೇವರ ದಯದಿಂದ ನಾನು ಗುಣಮುಖನಾಗಿ ಇದೀಗ ನಿಮ್ಮ ಜೊತೆ ಇದ್ದೇನೆ ಎಂದರು. ಈ ಬಾರಿ ವಿಲೇಜ್ ಕುಕ್ಕಿಂಗ್ ಚಾನೆಲ್ ಪೋಸ್ಟ್ ಮಾಡಿರುವ ಕಲ್ಲಂಗಡಿ ಹಣ್ಣಿನ ಮಿಲ್ಕ್ ಶೇಕ್ ವಿಡಿಯೋದಲ್ಲಿ ಅಜ್ಜ ಪೆರಿಯತಂಬಿ ಲವಲವಿಕೆಯಿಂದ ಇರುವುದು ವಿಡಿಯೋದಲ್ಲಿದೆ.


    ತಮಿಳುನಾಡಿನ ಒಂದು ಸಣ್ಣ ಹಳ್ಳಿಯ ಜನ ಅಡುಗೆ ವಿಡಿಯೋ ಮಾಡಿ ಇದೀಗ ವಿಶ್ವದ ಗಮನ ಸೆಳೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply