ಮುಂಬೈ ಮೇ 05: ಹಿಂದಿ ಕಿರುತೆರೆಯ ಖ್ಯಾತ ಹಾಸ್ಯನಟಿ ಭಾರತೀ ಸಿಂಗ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿರುವ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿರುವ ಭಾರತೀ ಸಿಂಗ್ ನನಗೆ ವಿಪರೀತ ಹೊಟ್ಟೆ ನೋವು ಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ದೆನೆ. ವೈದ್ಯಕೀಯ ಪರೀಕ್ಷೆಗಳ ಬಳಿಕ ಕಿಡ್ನಿಯಲ್ಲಿ ಕಲ್ಲು ಇದ್ದು, ವೈದ್ಯರು ಚಿಕಿತ್ಸೆ ಪ್ರಾರಂಭಿಸಿದ್ದಾರೆ ಎಂದಿದ್ದಾರೆ.
ಬಳಿಕ ಮಾತನಾಡಿದ ಅವರು ನಾನು ನನ್ನ ಮಗನನ್ನು ಬಿಟ್ಟು ಒಂದು ರಾತ್ರಿಯೂ ಕೂಡ ಕಳೆದಿಲ್ಲ. ಈಗ ಅವನಿಲ್ಲದೆ ನನಗೆ ಇರಲು ಆಗುತ್ತಿಲ್ಲ ಎಂದು ಕಣ್ಣೀರಿಟಿದ್ದಾರೆ.
ನೀವೆಲ್ಲರೂ ಯಾವಾಗಲೂ ಆರೋಗ್ಯವಾಗಿರಲಿ, ಏಕೆಂದರೆ ನನಗೆ ಎರಡು ವರ್ಷದ ಮಗುವಿದೆ ಮತ್ತು ನಾನು ಅವನಿಲ್ಲದೆ ಒಂದು ರಾತ್ರಿಯೂ ಉಳಿದಿಲ್ಲ ಮತ್ತು ಈಗ … ಮನೆಯಲ್ಲಿ ಬಹಳಷ್ಟು ಜನರಿದ್ದಾರೆ, ಅವನ ಅಜ್ಜಿ, ಚಿಕ್ಕಮ್ಮ, ಆದರೆ ನಾನು ಅಲ್ಲ, ” ಎಂದು ಕಣ್ಣೀರು ಹಾಕಿದ್ದಾರೆ. ಭಾರತೀ ಅವರ ಅಭಿಮಾನಿಗಳು ಅವರು ಬೇಗ ಗುಣಮುಖವಾಗಲಿ ಎಂದು ಪ್ರಾರ್ಥಿಸಿದ್ದಾರೆ.