FILM
ಟ್ರೆಂಡಿಂಗ್ ನಲ್ಲಿ ರಾಜ್ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್ ಸೋ ಸಿನೆಮಾದ ಡ್ಯಾಂಕ್ಸ್ ಅಂಥಮ್ ಸಾಂಗ್

ಬೆಂಗಳೂರು ಜೂನ್ 30: ಸಾಮಾಜಿಕ ಜಾಲತಾಣದಲ್ಲಿ ಇದೀಗ ಡ್ಯಾಂಕ್ಸ್ ಅಥಮ್ ಹಾಡು ಟ್ರೆಂಡಿಂಗ್ ನಲ್ಲಿದೆ. ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣಗೊಂಡ `ಸು ಫ್ರಮ್ ಸೋ’ ಕನ್ನಡ ಸಿನಿಮಾದ ಡ್ಯಾಂಕ್ಸ್ ಅಂಥಮ್ ವಿಡಿಯೋ ಸಾಂಗ್ ಬಿಡುಗಡೆ ಆಗಿ ಜನರ ಮನ ಸೆಳೆಯುತ್ತಿದೆ.
ಈ ಹಾಡಿಗೆ ಸಾಹಿತ್ಯ ರಾಜ್ ಬಿ ಶೆಟ್ಟಿ ಅವರದ್ದು ಅನುರಾಗ್ ಕುಲಕರ್ಣಿ (Anurag ಅವರು ಸೊಗಸಾಗಿ ಹಾಡಿದ್ದಾರೆ ಹಾಗೂ ಸುಮೇಧ್ ಕೆ ಅವರು ಉತ್ತಮ ಸಂಗೀತ ನೀಡಿದ್ದಾರೆ. ಇದರ ನೃತ್ಯ ಸಂಯ್ಯೋಜನೆಯನ್ನು ವಿನಾಯಕ ಆಚಾರ್ಯ ಮಾಡಿದ್ದಾರೆ. ಈ ಹಾಡಿನಲ್ಲಿ ಜೆಪಿ ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡು ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಹಾಗೂ ಇತರರು ಹೆಜ್ಜೆ ಹಾಕಿದ್ದಾರೆ.
ಸದ್ಯ ಕರಾವಳಿ ಸೇರಿದಂತೆ ಕರ್ನಾಟಕದಲ್ಲಿ ಈ ಹಾಡು ಟ್ರೆಂಡಿಂಗ್ ನಲ್ಲಿದೆ. ಮುಂದಿನ ಮೆಹಂದಿ ಪಾರ್ಟಿಗಳಿಗೆ ಈ ಹಾಡು ಪಕ್ಕಾ ಬಳಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಸು ಫ್ರಮ್ ಸೋ ಸಿನಿಮಾವನ್ನು ಜೆಪಿ ತುಮಿನಾಡು ನಟಿಸಿ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಎಸ್ ಚಂದ್ರಸೆಕರನ್ ಕಾರ್ಯ ನಿರ್ವಹಿಸಿದ್ದಾರೆ. ಈ ಸಿನಿಮಾವನ್ನು ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ, ರಾಜ್ ಬಿ ಶೆಟ್ಟಿ ಮೂವರು ಸೇರಿ ಅದ್ದೂರಿ ಯಾಗಿ ನಿರ್ಮಿಸಿದ್ದಾರೆ. ಸಂದೀಪ್ ತುಳಸಿದಾಸ್ ಅವರ ಹಿನ್ನೆಲೆ ಸಂಗೀತ ಇರುವ ಈ ಚಿತ್ರಕ್ಕಿದೆ ಅರ್ಜುನ್ ರಾಜ್ ಸಾಹಸ ಸಂಯೋಜನೆ ಮಾಡಿದ್ದಾರೆ.
ಮಂಗಳೂರು ಸುತ್ತಮುತ್ತಲಿನ ಊರಾದ ವೇಣೂರು, ಕಕ್ಯಪದವು ಹಾಗು ಇತರ ಕಡೆ ಸಿನಿಮಾ 50 ದಿನಗಳ ಕಾಲ ಚಿತ್ರಿಕರಣಗೊಂಡು ಇದೀಗ ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಈಗಾಗಲೇ ಯಟ್ಯೂಬ್ ನಲ್ಲಿ 8 ಲಕ್ಷಕ್ಕೂ ಅಧಿಕ ವಿಕ್ಷಣೆ ಪಡೆದುಕೊಂಡಿದೆ.
3 Comments