Connect with us

FILM

ಡ್ರಗ್ಸ್ ಸೇವಿಸುವ ಕಲಾವಿದರು ಚಿತ್ರರಂಗದಿಂದ ಬ್ಯಾನ್- ಎಚ್ಚರಿಕೆ ಕೊಟ್ಟ ನಿರ್ಮಾಪಕ ದಿಲ್ ರಾಜು

ಹೈದರಾಬಾದ್, ಜೂನ್ 27: ಇತ್ತೀಚೆಗೆ ಸಿನಿಮಾರಂಗದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿ ಕೇಳಿ ಬರುತ್ತಿದೆ. ಕಲಾವಿದರು, ನಿರ್ದೇಶಕರು ಕೂಡ ಡ್ರಗ್ಸ್ ಸೇವನೆ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.

ಮಾಲಿವುಡ್ ಚಿತ್ರರಂಗದಲ್ಲಿ ಇತ್ತೀಚೆಗೆ ಖ್ಯಾತ ನಟ ಶೈನ್ ಟಾಮ್, ನಿರ್ದೇಶಕರಾದ ಖಾಲಿದ್ ರೆಹಮಾನ್, ಅಶ್ರಫ್ ಹಮ್ಮಾ ಅವರನ್ನು ಡ್ರಗ್ಸ್ ಸೇವನೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿತ್ತು. ಇದಲ್ಲದೆ ಇತ್ತೀಚೆಗೆ ಕಾಲಿವುಡ್ ಶ್ರೀಕಾಂತ್, ನಟ ಕೃಷ್ಣರನ್ನು ಡ್ರಗ್ಸ್ ಸೇವನೆ ಆರೋಪದಲ್ಲಿ ಬಂಧಿಸಲಾಗಿದೆ. ಟಾಲಿವುಡ್‌ನಲ್ಲೂ ಡ್ರಗ್ಸ್ ಘಾಟು ಕಡಿಮೆ ಏನಿಲ್ಲ. ನಟಿ ಚಾರ್ಮಿ ಕೌರ್ ಡ್ರಗ್ಸ್ ಪ್ರಕರಣ ಟಾಲಿವುಡ್ ನಲ್ಲಿ ಜೋರಾಗಿ ಸದ್ದು ಮಾಡಿತ್ತು.

ಮಾಲಿವುಡ್ ಚಿತ್ರರಂಗ ಮಾದಕ ದ್ರವ್ಯ ಸೇವನೆ ಮಾಡುವ ಕಲಾವಿದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಡ್ರಗ್ಸ್ ಸೇವಿಸುವ ಕಲಾವಿದರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅದೇ ರೀತಿಯ ನಿರ್ಧಾರವನ್ನು ಟಾಲಿವುಡ್‌ನಲ್ಲೂ ತೆಗೆದುಕೊಳ್ಳುವುದಾಗಿ ತೆಲಂಗಾಣ ಸಿನಿಮಾ ಅಭಿವೃದ್ಧಿ ಕಾರ್ಪೋರೇಷನ್ ಅಧ್ಯಕ್ಷ, ನಿರ್ಮಾಪಕ ದಿಲ್ ರಾಜು ಹೇಳಿದ್ದಾರೆ.

ಇತ್ತೀಚೆಗೆ ಅಂತಾರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನದ ಪ್ರಯುಕ್ತ ತೆಲಂಗಾಣ ಸರ್ಕಾರ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿತ್ತು. ಇದರಲ್ಲಿ ನೂರಾರು ಜನರು ಹಾಗೂ ಖ್ಯಾತ ಕಲಾವಿದರು ಕೂಡ ಭಾಗಿಯಾಗಿದ್ದರು. ”ಮಲಯಾಳಂ ಚಿತ್ರರಂಗದವರು ಯಾರೆಲ್ಲ ಸೇವಿಸುತ್ತಾರೋ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಅದೇ ರೀತಿ ನಮ್ಮ ಟಾಲಿವುಡ್ ಚಿತ್ರರಂಗದಲ್ಲಿ ಯಾರಾದರೂ ಡ್ರಗ್ಸ್ ಸೇವಿಸುವ ಬಗ್ಗೆ ಮಾಹಿತಿ ಸಿಕ್ಕರೆ ಅವರನ್ನು ಚಿತ್ರರಂಗದ ನಿಷೇಧಿಸುತ್ತೇವೆ. ಈ ರೀತಿಯ ನಿರ್ಧಾರವನ್ನು ತರೋದಕ್ಕೆ ನಾನು ಚಿತ್ರರಂಗದ ಜೊತೆ ಈ ಬಗ್ಗೆ ಚರ್ಚಿಸುತ್ತೇನೆ” ಎಂದು ದಿಲ್ ರಾಜ್ ಹೇಳಿದ್ದಾರೆ.

Share Information
Continue Reading
Advertisement
2 Comments

2 Comments

    Leave a Reply

    Your email address will not be published. Required fields are marked *