Connect with us

    LATEST NEWS

     ಕುವೆಂಪು ಜನ್ಮದಿನ : ರಾಷ್ಟ್ರಕವಿಗೆ ಗೂಗಲ್‌ ಡೂಡಲ್‌ ಗೌರವ

     ಕುವೆಂಪು ಜನ್ಮದಿನ : ರಾಷ್ಟ್ರಕವಿಗೆ ಗೂಗಲ್‌ ಡೂಡಲ್‌ ಗೌರವ

    ಬೆಂಗಳೂರು, ಡಿಸೆಂಬರ್ 29 :ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನ ಇಂದು. ಕುವೆಂಪುರವರು ಹುಟ್ಟಿದ್ದು ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ. ಇಂದು ಅವರ 113 ನೇ ಜನ್ಮದಿನವಾಗಿದೆ.

    ಈ ವಿಶೇಷ ಕಾಲಘಟ್ಟದಲ್ಲಿ ವಿಶ್ವಮಾನವ ಸಂದೇಶ ಸಾರಿದ ಮಹಾನ್‌ ಕವಿಗೆ ಗೂಗಲ್‌ ವಿಶೇಷ ಡೂಡಲ್‌ ಮೂಲಕ ಗೌರವ ಸಲ್ಲಿಸಿದೆ.

    ಕುವೆಂಪು ಅವರು ಮಲೆನಾಡಿನ ಮಡಿಲಲ್ಲಿ ಹಚ್ಚಹಸಿರಿನ ಪರಿಸರದಲ್ಲಿ ಬಂಡೆಯೊಂದರ ಮೇಲೆ ಕುಳಿತು ಸಾಹಿತ್ಯ ಲೋಕದಲ್ಲಿ ಮಗ್ನರಾಗಿರುವಂತಿರುವ ಅತ್ಯಾಕರ್ಷಕ ಚಿತ್ರದ ಮೂಲಕ ಕನ್ನಡದಲ್ಲೇ ಗೂಗಲ್‌ ಎಂದು ಬರೆದಿರುವುದು ವಿಶೇಷವಾಗಿದೆ.

    ಕುವೆಂಪು ಅವರ ನೆಚ್ಚಿನ ಕಾಜಾಣಾ ಹಕ್ಕಿಯನ್ನೂ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

    ಬೊಮ್ಮನಹಳ್ಳಿ ಕಿಂದರಿ ಜೋಗಿ, ಕೊಳಲು, ಕಥನ ಕವನಗಳು, ಕಲಾ ಸುಂದರಿ, ನವಿಲು, ಪಕ್ಷಿಕಾಶಿ, ಶ್ರೀರಾಮಾಯಣ ದರ್ಶನಂ ಮಹಾಕಾವ್ಯವೂ ಸೇರಿ 30ಕ್ಕೂ ಹೆಚ್ಚು ಕಾವ್ಯ ಕೃತಿಗಳು. ಜಲಗಾರ, ಯಮನಸೋಲು, ವಾಲ್ಮೀಕಿ ಭಾಗ್ಯ ಸ್ಮಶಾನ ಕುರುಕ್ಷೇತ್ರ, ಮಹಾರಾತ್ರಿ, ರಕ್ತಾಕ್ಷಿ, ಬಿರುಗಾಳಿ, ಬೆರಳ್‌ಗೆ ಕೊರಳ್, ಶೂದ್ರ ತಪಸ್ವಿ, ಇತರೆ ನಾಟಕಗಳು, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಕಾದಂಬರಿಗಳು, ವಿಮರ್ಶೆ/ಕಾವ್ಯ ಮೀಮಾಂಸೆ-ಕಾವ್ಯ ,ಶಿಶುಸಾಹಿತ್ಯ ಹೀಗೆ ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅಪಾರ.
    ಜ್ಞಾನಪೀಠ, ರಾಜ್ಯ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪದ್ಮಭೂಷಣ, ಪಂಪ ಪ್ರಶಸ್ತಿ ಸೇರಿ ಅನೇಕ ಗೌರವಗಳು ಸಂದಿವೆ.

    ಕುವೆಂಪು ಅವರು 1994 ನವೆಂಬರ್‌ 11 ರಂದು ವಿಧಿವಶರಾಗಿದ್ದರು.ಇಂದು ನಾಡಿನಾದ್ಯಂತ ಕುವೆಂಪು ಅವರ ಸ್ಮರಣೆ ನಡೆಸಲಾಗುತ್ತಿದ್ದು, ಸಾಹಿತ್ಯಾಸಕ್ತರು ವಿಶೇಷ ಕಾರ್ಯಕ್ರಮಗಳನ್ನು ಪ್ರತೀ ವರ್ಷದಂತೆ ಈ ವರ್ಷವೂ ಹಮ್ಮಿಕೊಂಡಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply