Connect with us

    LATEST NEWS

    ಮುಂಬೈ ಕಮಲಾ ಮಿಲ್ಸ್ ಕಟ್ಟಡದಲ್ಲಿ ಭಾರಿ ಅಗ್ನಿ ಅನಾಹುತ : 15 ಕ್ಕೂ ಅಧಿಕ ಸಾವು

    ಮುಂಬೈ ಕಮಲಾ ಮಿಲ್ಸ್ ಕಟ್ಟಡದಲ್ಲಿ ಭಾರಿ ಅಗ್ನಿ ಅನಾಹುತ : 15 ಕ್ಕೂ ಅಧಿಕ ಸಾವು

    ಮುಂಬಯಿ, ಡಿಸೆಂಬರ್ 29 : ಮುಂಬಯಿ ನಗರದ ಹೃದಯ ಭಾಗದಲ್ಲಿರುವ ಕಮಲಾ ಮಿಲ್ಸ್‌ ಆವರಣದಲ್ಲಿರುವ ಬಹುಮಹಡಿ ಕಟ್ಟಡವೊಂದರಲ್ಲಿ ಶುಕ್ರವಾರ ನಸುಕಿನ ವೇಳೆ  ಭಾರೀ ಅಗ್ನಿ ಅವಘಡ ಸಂಭವಿಸಿದೆ.

    ಈ ಭೀಕರ ಅಗ್ನಿ ಅನಾಹುತದಲ್ಲಿ 15 ಕ್ಕೂ ಅಧಿಕ ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.  20 ಕ್ಕೂ ಅಧಿಕ ಜನ  ಗಂಭೀರವಾಗಿ  ಗಾಯಗೊಂಡು ಆಸ್ಪತ್ರೆಗೆ ದಾಖಲಿಸ್ಪಟ್ಟಿದ್ದಾರೆ.

    ಮಧ್ಯ ರಾತ್ರಿ  ನಂತರ ಕಟ್ಟಡದ ಮೇಲಿನ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.  ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಗೆ ಇಡೀಯ  ಕಟ್ಟಡಕ್ಕೆ ವ್ಯಾಪಿಸಿಕೊಂಡಿದೆ.

    ಕೂಡಲೇ ಸ್ಥಳಕ್ಕೆ 10 ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ.

    ಅವಘಡದ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಬಿಎಂಸಿಯ ವಿಪತ್ತು ನಿರ್ವಹಣಾ ದಳದ ಸದಸ್ಯರು , ಅಂಬುಲೆನ್ಸ್‌ಗಳು ಸ್ಥಳಕ್ಕೆ ದೌಡಾಯಿಸಿ  ರಕ್ಷಣಾ ಕಾರ್ಯವನ್ನೂ ರಾತ್ರಿಯಿಂದಲೇ ನಡೆಸಿದರು.

    25 ಕ್ಕೂ ಹೆಚ್ಚು ಗಾಯಾಳುಗಳನ್ನು ರಕ್ಷಿಸಿ ಕೆಇಎಮ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.  9 ಮಂದಿ ಗಾಯಾಳುಗಳಿಗೆ ಭಾಟಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಕಟ್ಟಡದಲ್ಲಿ ವಾಣಿಜ್ಯ ಮಳಿಗೆಗಳು , ಹೊಟೇಲ್‌ಗ‌ಳಿದ್ದವು ಎಂದು ತಿಳಿದು ಬಂದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಹರಾಷ್ಟ್ರ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

    ವಿಡಿಯೋಗಾಗಿ..

    Share Information
    Advertisement
    Click to comment

    You must be logged in to post a comment Login

    Leave a Reply