Connect with us

    LATEST NEWS

    ರೈ ನಿಂದನೆ ಹಿನ್ನೆಲೆ :ಸಾರ್ವಜನಿಕ ವೇದಿಕೆಯಲ್ಲಿ ರಕ್ತ ಕಣ್ಣೀರು ಹಾಕಿದ ಜನಾರ್ದನ ಪೂಜಾರಿ

    ರೈ ನಿಂದನೆ ಹಿನ್ನೆಲೆ :ಸಾರ್ವಜನಿಕ ವೇದಿಕೆಯಲ್ಲಿ ರಕ್ತ ಕಣ್ಣೀರು ಹಾಕಿದ ಜನಾರ್ದನ ಪೂಜಾರಿ

    ಮಂಗಳೂರು, ಡಿಸೆಂಬರ್ 29 : ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಮತ್ತೆ ಗದ್ಗದಿತರಾಗಿದ್ದಾರೆ.

    ಸಚಿವ ರಮಾನಾಥ ರೈ ತನ್ನ ವಿರುದ್ಧ ಅವಾಚ್ಯ ಶಬ್ದ ಬಳಸಿ ನಿಂದಿಸಿದರೆಂಬ ವಿಚಾರವನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿಕೊಂಡು ಮತ್ತೆ ಅತ್ತು ಬಿಟ್ಟಿದ್ದಾರೆ.

    ಮಂಗಳೂರಿನ ಗರೋಡಿ ಶ್ರೀ ಬ್ರಹ್ಮಬೈದರ್ಕಳ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ 80 ವರ್ಷದ ಮುತ್ಸದ್ದಿ  ಪೂಜಾರಿಯವರು ತನ್ನ ತಾಯಿ ಹೆಸರು ಹೇಳಿಕೊಂಡು ಗದ್ಗದಿತರಾದ್ರು.

    ಇದು ಸತ್ಯ ನ್ಯಾಯಕ್ಕಾಗಿ ಹೋರಾಡಿದ ಕೋಟಿ ಚೆನ್ನಯರ ಗರೋಡಿ.  ನನ್ನ ತಾಯಿ ಚೆನ್ನಮ್ಮ.

    ತಾಯಿಯ ತಾಯಿ ದೇಯಿ ಬೈದೆತಿ. ಕೋಟಿ ಚೆನ್ನಯರ ತಾಯಿಯೂ ದೇಯಿ ಬೈದೆತಿ. ಹಾಗಾದ್ರೆ ನನ್ನ ತಾಯಿ ರಮಾನಾಥ ರೈ ಹೇಳಿದಂತೆ ಸೂಳೆಯೋ ಅನ್ನುವ ಪ್ರಶ್ನೆ ಸಭೆಯ ಮುಂದಿಟ್ಟು ಗೋಗರೆದಿದ್ದಾರೆ.

    ಸಾವಿರಾರು ಜನ ಸೇರಿದ್ದ ಸಭೆಯಲ್ಲಿ 80 ವರ್ಷದ ಹಿರಿಯರಾದ ಜನಾರ್ದನ ಪೂಜಾರಿಯವರು ಅತ್ತು ಕರೆದಾಗ, ಸಭೆಯಲ್ಲಿದ್ದ ಎಲ್ಲರೂ ಕಣ್ಣೀರಾದರು.

    ಮಂಗಳೂರು ಮೇಯರ್ ಕವಿತಾ ಸನಿಲ್ ಕೂಡ ವೇದಿಯಲ್ಲೇ ಅತ್ತು ಬಿಟ್ಟರು.

    ಆರೆಸ್ಸೆಸ್  ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

    ಇತ್ತೀಚೆಗೆ ಮಂಗಳೂರಿನ ಸುರತ್ಕಲ್ ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಸಚಿವ ರಮಾನಾಥ ರೈ,  ಜನಾರದನ ಪೂಜಾರಿಯವರನ್ನು  ಖೀಳು ಪದಗಳಿಂದ ನಿಂದಿಸಿದ್ದು ಕಾಂಗ್ರೆಸಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

    ಪೂಜಾರಿ ಅವರ ಈ ಕಣ್ಣೀರು ಸಚಿವ ರಮಾನಾಥ ರೈ ಅವರಿಗೆ ಮುಂದಿನ ರಾಜಕೀಯ ಭವಿಷ್ಯಕ್ಕೆ ಮುಳುವಾಗಲಿದೆ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

    ನೇರಾ ನಡೆ ನುಡಿಯ,ಖಡಕ್ ಮಾತಿನ ಪೂಜಾರಿ ಅವರು ಈ ಪರಿಯಾಗಿ ಅಳುವುದು ಹಲವಾರು ಹಿರಿಯ – ಕಿರಿಯ ಕ್ರಾಗೆಸ್ಸಿಗರಿಗೆ ತೀವ್ರ ನೋವುಂಟುಮಾಡಿದೆ.

    ಇದು ಮುಂಬರುವ ಚುನಾವಣೆಯಲ್ಲಿ ರಮಾನಾಥ ರೈ ಅವರಿಗೆ ಮುಳುವಾಗುವ ಸಾಧ್ಯತೆ ಹೆಚ್ಚಿದೆ.

    ವಿಡಿಯೋಗಾಗಿ..

    Share Information
    Advertisement
    Click to comment

    You must be logged in to post a comment Login

    Leave a Reply