ಮುಂಬೈ ನಿಂದ ಆಗಮಿಸಿದ ಬೆಳ್ತಂಗಡಿ ಆರಂಬೋಡಿಯ ಮಹಿಳೆಗೆ ಕೊರೊನಾ

ಮಂಗಳೂರು ಮೇ,21: ಮುಂಬೈಯಿಂದ ಮಂಗಳೂರಿಗೆ ಆಗಮಿಸಿದ ಮಹಿಳೆಯೊಬ್ಬರಿಗೆ ಕೊರೊನಾ ಸೊಂಕು ದೃಢಪಟ್ಟಿದೆ. 29 ವರ್ಷ ವಯಸ್ಸಿನ ಮಹಿಳೆ ಮೇ 18 ರಂದು ಮುಂಬೈಯ ಡೊಂಬಿಲಿಯ ಥಾಣೆಯಿಂದ ಆಗಮಿಸಿದ್ದರು.

ಅವರನ್ನು ಬೆಳ್ತಂಗಡಿಯಲ್ಲಿ ಜಿಲ್ಲಾಡಳಿತ ವತಿಯಿಂದ ಸರಕಾರಿ ಕ್ವಾರಂಟೈನ್ ನಲ್ಲಿಡಲಾಗಿತ್ತು. ಮಹಿಳೆಯ ಗಂಟಲ ದ್ರವ ತೆಗೆದು ಪರಿಕ್ಷೆಗೆ ಕಳುಹಿಸಲಾಗಿತ್ತು. ಇಂದು ಫಲಿತಾಂಶ ಬಂದಿದ್ದು ಮಹಿಳೆಗೆ ಕೊರೊನಾ ಸೊಂಕು ದೃಢಪಟ್ಟಿದೆ.

ಇನ್ನು ಇಂದು ಮಧ್ಯಾಹ್ನದವರೆಗಿನ ಕೊರೊನಾ ಹೆಲ್ತ್ ಬುಲೆಟಿನ್ ನಲ್ಲಿ 105 ಜನರಿಗೆ ಕೊರೊನಾ ಸೊಂಕು ದಾಖಲಾಗಿದೆ. ಇಂದು ದಾಖಲಾದ ಬಹುತೇಕ ಪ್ರಕರಣಗಳು ಮುಂಬೈ ಮೂಲ ಆಗಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 1710 ಕ್ಕೆ ಏರಿಕೆಯಾಗಿದ್ದು, 1080 ಆಕ್ಟಿವ್ ಪ್ರಕರಣಗಳು ಸದ್ಯ ರಾಜ್ಯದಲ್ಲಿದೆ.