Connect with us

LATEST NEWS

ರಸ್ತೆ ನಿರ್ಮಾಣದ ನೆಪದಲ್ಲಿ ಲಕ್ಷಾಂತರ ಮೌಲ್ಯದ ಮರ ದೋಚಿದ ಮರಗಳ್ಳರು

ರಸ್ತೆ ನಿರ್ಮಾಣದ ನೆಪದಲ್ಲಿ ಲಕ್ಷಾಂತರ ಮೌಲ್ಯದ ಮರ ದೋಚಿದ ಮರಗಳ್ಳರು

ಪುತ್ತೂರು ಮೇ.21: ರಸ್ತೆ ನಿರ್ಮಿಸುತ್ತೇವೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಕಾಲನಿಯ ಜನರನ್ನು ವಂಚಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿದ ಘಟನೆ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಶೇಖಮಲೆ ಅಂಬೇಡ್ಕರ್ ಕಾಲನಿಯಲ್ಲಿ ನಡೆದಿದೆ.

ಕಾಲನಿಗೆ ರಸ್ತೆ ನಿರ್ಮಿಸುವ ಕಾರಣಕ್ಕಾಗಿ ಕಾಲನಿಯ ಮಂದಿ ಮರ ಕಡಿಯಲು ಅವಕಾಶ ನೀಡಿದ್ದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಮರಗಳ್ಳರು ಕಾಲನಿ ಪರಿಸರದಲ್ಲಿದ್ದ ಎಲ್ಲಾ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸಿದ್ದಾರೆ. ಪುತ್ತೂರು ಅರಣ್ಯ ಇಲಾಖೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಸಾಗಾಟವಾಗದೆ ಉಳಿದ ಮರಗಳನ್ನು ವಶಕ್ಕೆ ಪಡೆದಿದೆ.

Facebook Comments

comments