ಮಂಗಳೂರು ವಿಮಾನ ದುರಂತದ ದಿನವೇ ಪಾಕಿಸ್ತಾನದಲ್ಲಿ ವಿಮಾನ ಪತನ 107 ಮಂದಿ ಸಜೀವ ದಹನ

ಮಂಗಳೂರು ಮೇ.22:ಮಂಗಳೂರು ವಿಮಾನ ದುರಂತ ನಡೆದು ಇಂದಿಗೆ 10 ವರ್ಷ. ಮೇ 22, 2010ರಂದು ಮಂಗಳೂರು ವಿಮಾನ ದುರಂತ ಸಂಭವಿಸಿ 158 ಮಂದಿ ಮೃತಪಟ್ಟಿದ್ದರು. ಕಾಕತಾಳೀಯವೆಂಬಂತೆ ಇಂದು ಪಾಕಿಸ್ಥಾನದಲ್ಲಿ ವಿಮಾನವೊಂದು ಪತನವಾಗಿದ್ದು, 107ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

 ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ರೀತಿಯೇ ಅವಘಡ ಕರಾಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ, ಇನ್ನೇನು ಲ್ಯಾಂಡಿಂಗ್ ಆಗಲು ಕೆಲವೇ ಕ್ಷಣಗಳಿರುವಾಗ ಕರಾಚಿ-ಲಾಹೋರ್ ಪಿಐಎ ವಿಮಾನ ಪತನವಾಗಿದೆ.

ಲಾಹೋರ್‌ನಿಂದ 99 ಪ್ರಯಾಣಿಕರನ್ನು ಹೊತ್ತ ಕರಾಚಿಗೆ ಆಗಮಿಸುತ್ತಿದ್ದ ವಿಮಾನ 8303, ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಅನ್ನುವಷ್ಟರಲ್ಲೇ ದುರಂತ ಸಂಭವಿಸಿದೆ. ಜಿನ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಲ್ಯಾಡಿಂಗ್ ಸನಿಹ ರೆಸಿಡೆನ್ಶಿಯಲ್ ವಲಯವಿದೆ. ಇಲ್ಲಿ ಹಲವು ಮನೆಗಳು ಹಾಗೂ ನಿವಾಸಿಗಳಿದ್ದಾರೆ. ವಿಮಾನ ಪತನದಿಂದ ಇದೀಗ ಇಲ್ಲಿನ ಕೆಲ ಮನೆಗಳು ಹೊತ್ತಿ ಉರಿದಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದೆ. ಸದ್ಯ ಸಾವಿನ ಸಂಖ್ಯೆ ಹೆಚ್ಚಾಗುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮಂಗಳೂರು ವಿಮಾನ ದುರಂತದ ರೀತಿಯಲ್ಲೇ ಇದೀಗ ಕರಾಚಿಯಲ್ಲಿ ವಿಮಾನ ದುರಂತ ಸಂಭವಿಸಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುಬೈನಿಂದ ಮೇ. 22, 2020ರಲ್ಲಿ ಮಂಗಳೂರಿನತ್ತ ಪ್ರಯಾಣ ಬೆಳೆಸಿತ್ತು. ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ಗೂ ಮುನ್ನ ವಿಮಾನ ಪತನಗೊಂಡಿತ್ತು. ಇದರಲ್ಲಿದ್ದ 158 ಪ್ರಯಾಣಿಕರು ಸಾವನ್ನಪ್ಪಿದ್ದರೆ, ಕೇವಲ 8 ಮಂದಿ ಬದುಕುಳಿದಿದ್ದರು.