ಸುರತ್ಕಲ್ ಜುಲೈ 02: ಎರಡು ಖಾಸಗಿ ಬಸ್ ಗಳ ನಡುವೆ ಮುಖಾಮಖಿ ಡಿಕ್ಕಿಯಾದ ಘಟನೆ ಸುರತ್ಕಲ್ ಮಧ್ಯ ಶಾಲೆ ಬಳಿ ನಡೆದಿದೆ. ಅಪಘಾತದ ಹೈಸ್ಕೂಲ್, ಪಿಯುಸಿ ವಿದ್ಯಾರ್ಥಿಗಳು, ಶಿಕ್ಷಕಿಯರು ಸೇರಿ 25 ಮಂದಿ ಗಾಯಗೊಂಡಿದ್ದಾರೆ.

ಬೆಳಗ್ಗೆ 9ರ ಸುಮಾರಿಗೆ ಘಟನೆ ನಡೆದಿದ್ದು ಎರಡೂ ಬಸ್ನಲ್ಲಿ ಶಾಲಾ ಮಕ್ಕಳು ಸೇರಿದಂತೆ ಅನೇಕ ಪ್ರಯಾಣಿಕರಿದ್ದರು. ಅಪಘಾತದ ದೃಶ್ಯ ಒಂದು ಬಸ್ಸಿನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮಂಗಳೂರಿನ ಸ್ಟೇಟ್ ಬ್ಯಾಂಕ್ ಕಡೆಯಿಂದ ಚೇಳಾಯರಿಗೆ ತೆರಳುತ್ತಿದ್ದ ನಂದನ್ ಹೆಸರಿನ ಬಸ್ ನೇರವಾಗಿ ಬಂದು ಡಿಕ್ಕಿಯಾಗುವುದು ಕಾಣುತ್ತದೆ. ಎರಡೂ ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದ್ದು ಅದೃಷ್ಟವಶಾತ್ ಎರಡೂ ಬಸ್ಸಿನ ಚಾಲಕರು ಹೆಚ್ಚಿನ ಅಪಾಯಗಳಿಲ್ಲದೆ ಪಾರಾಗಿದ್ದಾರೆ.

ಅಪಘಾತಕ್ಕೆ ಒಂದು ಬಸ್ಸಿನ ಸ್ಟೇರಿಂಗ್ ಜಾಮ್ ಆಗಿದ್ದು ಕಾರಣ ಎಂದು ಹೇಳಲಾಗಿದೆ. ಘಟನೆಯಲ್ಲಿ ಎರಡೂ ಬಸ್ಸಿನಲ್ಲಿದ್ದ ವಿಧ್ಯಾರ್ಥಿಗಳು ಶಿಕ್ಷಕರು ಮತ್ತು ಇತರೆ ಪ್ರಯಾಣಿಕರು ಸೇರಿದಮತೆ 21 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ. 4 ಜನರಿಗೆ ಗಂಭೀರ ಪ್ರಮಾಣದ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಕುರಿತಂತೆ ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.