Connect with us

    LATEST NEWS

    ಸುಳ್ಯದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ದನಕಳ್ಳತನ

    ಸುಳ್ಯದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ದನಕಳ್ಳತನ

    ಸುಳ್ಯ ಫೆಬ್ರವರಿ 16: ಮಾರುತಿ 800 ಹಾಗೂ ಸ್ಕೋರ್ಪಿಯೋ ಕಾರಿನಲ್ಲಿ ಸುಳ್ಯ ಚೆನ್ನಕೇಶ್ವರ ದೇವಸ್ಥಾನದ ಆವರಣದಿಂದ ದನಗಳನ್ನು ಕದ್ದು ಸಾಗಿಸುತ್ತಿರುವುದು ದೇವಸ್ಥಾನದ ಸಿ.ಸಿ.ಕ್ಯಾಮಾರಾ ದಲ್ಲಿ ದಾಖಲಾಗಿದೆ.

     

    ಫೆಬ್ರವರಿ 16 ರಂದು ಮುಂಜಾನೆ 2.22 ರ ಸುಮಾರಿಗೆ ಈ ಘಟನೆ ನಡೆದಿರೋದು ಸಿ.ಸಿ.ಕ್ಯಾಮಾರಾದಲ್ಲಿ ದಾಖಲಾಗಿದೆ. ವಿಪರ್ಯಾಸವೆಂದರೆ ಸುಳ್ಯ ಪೋಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ಈ ಘಟನೆ ನಡೆದಿದ್ದು, ಜಿಲ್ಲೆಯಲ್ಲಿ ದನ ಕಳ್ಳತನ ರಾಜಾರೋಷವಾಗಿ ನಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿ ಎಂಬಂತಿದೆ.

    ಜಿಲ್ಲೆಯಲ್ಲಿ ದನಕಳ್ಳತನ ನಡೆಯುತ್ತಿರುವ ಹಿನ್ನಲೆಯಲ್ಲಿ ವಿವಿಧ ಸಂಘಟನೆಗಳು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಲು ಹೋರಾಟದ ಹಾದಿ ಹಿಡಿಯಲು ನಿರ್ಧರಿಸಿವೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply