LATEST NEWS
ಅಂತರ್ ಜಿಲ್ಲಾ ಕುಖ್ಯಾತ ದರೋಡೆಕೋರರ ಬಂಧನ
ಅಂತರ್ ಜಿಲ್ಲಾ ಕುಖ್ಯಾತ ದರೋಡೆಕೋರರ ಬಂಧನ
ಉಡುಪಿ ಫೆಬ್ರವರಿ 16: ಅಂತರ್ ಜಿಲ್ಲಾ ಕುಖ್ಯಾತ ದರೋಡೆಕೋರರ ಬಂಧಿಸುವಲ್ಲಿ ಕಾರ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಮಾರು 17 ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳಾಗಿದ್ದ ಈ ದರೋಡೆಕೊರರನ್ನು ಕಾರ್ಕಳ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ ಮೂರು ಜನ ಆರೋಪಿಗಳು ಪರಾರಿಯಾಗಿದ್ದಾರೆ.
ಬಂಧಿತರನ್ನು ಸಾಜಿದ್ ರೆಹಮಾನ್ ಅಮಿರುದ್ದೀನ್ ಯಾನೆ ಸದ್ದಾಂ, ಮಾರೂಫ, ನಟರಾಜ ಬಂಧಿತ ಡಕಾಯಿತರು. ಬಂಧಿತರ ಮೇಲೆ ಸುಮಾರು 17 ಪ್ರಕರಣಗಳಿದ್ದವು, ಉಡುಪಿ,ಕಾರ್ಕಳ,ಹೆಬ್ರಿ,ಭಟ್ಕಳ,ಕಾಪು ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣಗಳು ದಾಖಲಾಗಿದ್ದವು. ಸರಗಳ್ಳತನ, ಬೈಕ್ ಕಳವು, ಕಳ್ಳತನದಲ್ಲಿ ಈ ಡಕಾಯಿತರು ಭಾಗಿಯಾಗಿದ್ದರು.
ಕಾರ್ಯಾಚರಣೆ ವೇಳೆ ಮೂರು ಜನ ಆರೋಪಿಗಳು ಪರಾರಿಯಾಗಿದ್ದು, ತಪ್ಪಿಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಬಂಧಿತರಿಂದ ಸುಮಾರು 8.80 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
You must be logged in to post a comment Login