ಧೀರಜ್ ಬೆಳ್ಳಾರೆ ಅಂದು ಓಡಿದ್ದೇವೆ ಜೀವ ಉಳಿಸಿಕೊಳ್ಳಲು. ಆದರೂ ಉಳಿದದ್ದು ಕೆಲವರದ್ದು ಮಾತ್ರ. ಕೆಲವು ವರ್ಷಗಳೇ ಸಂದಿವೆ.ಊರು ನೋಡಬೇಕೆನಿಸಿತು ತಿರುಗಿ ಬಂದಿದ್ದೇನೆ .ಯಾವುದು ಮೊದಲಿನ ಹಾಗಿಲ್ಲ. ಊರು ಅನಾಥವಾಗಿದೆ. ಮುಳ್ಳು ಪೊದೆಗಳೇ ಆಶ್ರಯ ಬೇಡಿ ಪಡೆದಿದೆ...
ಭೋರ್ಗರೆತ ಧೀರಜ್ ಬೆಳ್ಳಾರೆ ಹುಟ್ಟಿನಿಂದ ಅಮ್ಮನ ಲಾಲಿಗಿಂತ ಕಡಲ ಬೋರ್ಗರೆತವೇ ಕೇಳುತ್ತಿರುವಾಗ ಅದೇ ಹೆಚ್ಚು ಆಪ್ಯಾಯಮಾನವಾಗುತ್ತಿದೆ. ಜನರ ಊರಿಗೆ ,ಅಲೆಯ ನೀರಿಗೆ ಮಧ್ಯದಲ್ಲಿರುವ ಮರಳೇ ನಮ್ಮ ಕ್ರೀಡಾಂಗಣ. ಯಾವತ್ತೂ ಸಮುದ್ರ ನಮ್ಮನ್ನ ಭಯ ಪಡಿಸಿಲ್ಲ ....
ಅವಸರ ಅಲ್ಲಿಯ ಬಾಗಿಲು ಮುಚ್ಚಲಾಗಿದೆ .ಎಷ್ಟು ಬೇಡಿದರೂ ಒಳ ಬಿಡುತ್ತಿಲ್ಲ. ಒಳಗೆ ಪಾದವಿರಿಸುವ ಅರ್ಹತೆ ಸಂಪಾದಿಸದಿದ್ದರೆ ಬಾಗಿಲ ಬಳಿ ಬಂದವರನ್ನು ತಿರಸ್ಕರಿಸುತ್ತಾರೆ. ಬಾಗಿಲು ದಾಟಿ ಒಳಹೊಕ್ಕರೆ ಸಾಕು ಅದೊಂದು ಅದ್ಭುತ ಪ್ರಪಂಚ. ಮಿನುಗುವ ತಾರೆಗಳ ಉಸಿರ...
ತುಂಡು ಕಾಗದ ಮಳೆಯೊಂದು ಹನಿಗಳ ಹೊತ್ತು ಮರ,ಗಿಡ ,ಹುಲ್ಲು, ಬಳ್ಳಿ ,ಮನೆಗಳ ಮೇಲೆ ಸುರಿದು ಮಣ್ಣ ಮುತ್ತಿಕ್ಕುವ ಗಳಿಗೆ ಸನ್ನಿಹಿತವಾಗುವ ಸೂಚನೆ ನೀಡಲು ಡಂಗುರದವ ಕಪ್ಪು ಮೋಡಗಳೊಂದಿಗೆ ಬಂದು ಅಲ್ಲಲ್ಲಿ ಚಿತ್ತಾಕರ್ಷಕ ರೇಖೆ ಮೂಡಿಸಿ ಚಿತ್ತಾರ...
ಎರಡು ಘಟನೆ ಮನೆಗೆ ತೆರಳುವ ಸಮಯ ಬಸ್ಸಿಗಾಗಿ ಕಾಯುತ್ತಿದ್ದೆ. ದ್ವಿಪಥದ ರಸ್ತೆಯಾಗಿದ್ದರಿಂದ ಅತ್ತ ಕಡೆಗೂ ಒಂದು ಬಸ್ ನಿಲ್ದಾಣ .ನನ್ನ ನಿಲ್ದಾಣದಲ್ಲಿ ಬರಿಯ ಗಂಡು ದೇಹಗಳ ಇದ್ದ ಕಾರಣ ಅತ್ತ ಕಡೆಗೊಮ್ಮೆ ದೃಷ್ಟಿ ಹರಿಸಿದೆ. ಬಯಸಿದ್ದೇನೂ...
ಮೈದಾನ ನೀವು ದೊಡ್ಡೋರು ನಿಮ್ಮ ಮಾತಿಗೆ ಪೊಲೀಸ್ ಸ್ಟೇಷನ್, ಕೋರ್ಟುಗಳು ಸಹಕಾರ ನೀಡುತ್ತದೆ .ನಾನು ಯಾರ ಬಳಿ ಹೇಳಲಿ. ನನ್ನ ಆಡೋ ಮೈದಾನ ಮಾಯವಾಗಿದೆ. ಮಳೆಗಾಲವಾದರೆ ಕೆಸರಿನೊಂದಿಗೆ ,ಬಿಸಿಲಾದರೆ ಬಿಸಿಯೊಂದಿಗೆ ಆಟವಾಡುತ್ತಿದ್ದೆ ನಮ್ಮ ಖುಷಿಯ ಬಗ್ಗೆ...
ಅವಕಾಶ ಗೂಡು ಭದ್ರವಾಗಿದೆ ಸೋರುವ ಭಯವಿಲ್ಲ ,ಜಾರಿಹೋಗುವ ತೊಂದರೆ ಇಲ್ಲ ,ಬದುಕಿಗೆ ಆಧಾರ ಸಾಕೆನ್ನುವಷ್ಟು ಗಟ್ಟಿಯಾಗಿದೆ .ಆದರೆ ಆ ಗೂಡಿನ ಹಕ್ಕಿಗೆ ಒಂಥರಾ ಕಸಿವಿಸಿ ಗೂಡಿನೊಳಗಿನ ಬದುಕು ಬಂದನವಾಗಿದೆ. ಉಳಿದ ಹಕ್ಕಿಗಳಂತೆ ಸ್ವಚ್ಛಂದದ ಹಾರಾಟಕ್ಕೆ ಅನುಮತಿ...
ಯಾರಿವನು ಆತ ನಮ್ಮಂತೆ ಇಲ್ಲ. ವಸ್ತ್ರ ವಿಕಾರ ,ಜಡ್ಡುಗಟ್ಟಿದ ಕೇಶರಾಶಿ ಕಂಡು ಜನ “ಹುಚ್ಚಾ” ಅಂತಿದ್ದಾರೆ. ತೊಟ್ಟಿಲಲ್ಲಿ ಜೋಗುಳ ಹಾಡುತ್ತಾ ಅವನಮ್ಮ ಕೂಗಿದ ಹೆಸರ ನೆನಪಿಲ್ಲ .ಈಗ ಕರಿಯೋ ಹುಚ್ಚನೆಂಬ ನಾಮದೇಯಕ್ಕೆ ಬೇಸರವೂ ಇಲ್ಲ ....
ಚಿತ್ರ ನೆಲದ ಮೇಲೆ ತಳವೂರಿನಿಂತ ಹೊಸಮನೆಯ ಗೋಡೆಯಲ್ಲಿ ಒಂದು ಚಿತ್ರವಿದೆ. ಎಲ್ಲಿದ್ದರೂ ಒಮ್ಮೆ ಹತ್ತಿರ ಹೋಗಿ ನೋಡುತ್ತಾ ನಿಲ್ಲಬೇಕೆನಿಸುವಷ್ಟು ಅಂದವಾಗಿದೆ . ಅಂಬೆಗಾಲಿನಿಂದ ಎದ್ದುನಿಂತು ಕೆಲವು ವರ್ಷ ದಾಟಿದ ಆ ಮನೆಯ ಮಗು ದಿನವೂ ಗಮನಿಸುತ್ತದೆ,...