Connect with us

    LATEST NEWS

    ರೀ..ಮೈಕಲ್​ ಜಾಕ್ಸನ್​ ಸತ್ತಿಲ್ಲರೀ.!

    ನವದೆಹಲಿ: ವಿಶ್ವದ ಅಗ್ರಗಣ್ಯ​ ಗಾಯಕ ಪಾಪ್​ ಲೋಕದ ಕಿಂಗ್​ ಎಂದೇ ಖ್ಯಾತಿಯಾಗಿದ್ದ ಮೈಕಲ್ ಜಾಕ್ಸನ್ ಅವರು ಇನ್ನೂ ಬದುಕಿದ್ದಾರೆ ಎಂಬ ಸುದ್ದಿ ಇದೀಗ ಜಗತ್ತಿನಾದ್ಯಂತ ಭಾರಿ ಸಂಚಲವನ್ನೇ ಸೃಷ್ಟಿ ಮಾಡಿದೆ.

    ಎಲ್ಲರೂ ಅಂದುಕೊಂಡಂತೆ ಮೈಕಲ್ ಜಾಕ್ಸನ್ ಸತ್ತು 15 ವರ್ಷಗಳೆ ಸಂದಿವೆ. ಅನಾರೋಗ್ಯದಿಂದ ಜಾಕ್ಸನ್ಸಾವನ್ನಪ್ಪಿದ ಬಗ್ಗೆ ಆಗಲೇ ಸುದ್ದಿಯಾಗಿತ್ತು. ಆದರೆ ಈ ಪಾಪ್ ತಾರೆ ಮೈಕಲ್ ಜಾಕ್ಸನ್​ ಇನ್ನೂ ಬದುಕಿದ್ದಾರೆ ಎಂದು ಅಮೆರಿಕನ್​ ಗಾಯಕ ಅಕೊನ್​ ಖಚಿತವಾಗಿ ಹೇಳಿದ್ದಾರೆ. ಜಾಕ್ಸನ್​ ಅವರು ಮರಳಿ ಬರಲು ರಹಸ್ಯವಾಗಿಯೇ ತಯಾರಿ ನಡೆಸುತ್ತಿದ್ದಾರೆ. ಭರ್ಜರಿಯಾಗಿ ರೀ ಎಂಟ್ರಿ ಕೊಡಲಿದ್ದಾರೆ ಎಂದು ಅಕೊನ್​ ವಾದಿಸಿದ್ದಾರೆ. ಅಕೊನ್ ಮಂಡಿಸಿದ ವಾದ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಮೈಕಲ್ ಜಾಕ್ಸನ್ ಅವರ ಆರೋಗ್ಯ ಚೆನ್ನಾಗಿದೆ ಎಂದು ಅವರ ನಿಕಟವರ್ತಿಯೊಬ್ಬರು ಸಹ ಖಚಿತಪಡಿಸಿದ್ದಾರಂತೆ. ಇನ್ನೂ ನಿರ್ಮಾಪಕ ಹಾಗೂ ಜಾಕ್ಸನ್​ ಅವರ ಆಪ್ತ ಟೆಡ್ಡಿ ರಿಲೇ ಸಹ ಜಾಕ್ಸನ್​ ಜೀವಂತವಾಗಿರುವುದನ್ನು ಬಲವಾಗಿ ನಂಬಿದ್ದಾರೆ ಮತ್ತು ವಾಪಸ್​ ಬರಲಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ದರು. ಇಂದಿಗೂ ಅದೇ ನಂಬಿಕೆಯನ್ನು ಹೊಂದಿದ್ದಾರೆ. ಅಂದಹಾಗೆ ಸಿಕ್ಕಾಪಟ್ಟೆ ಹಿಟ್​ ಆದ ಡೇಂಜರಸ್​ ಆಲ್ಬಮ್,​ ರಿಲೇ ಮತ್ತು ಜಾಕ್ಸನ್​ ಸಹಯೋಗದಲ್ಲೇ ಮೂಡಿಬಂದಿತ್ತು. ಮೈಕಲ್​ ಜಾಕ್ಸನ್​ 2009ರ ಜೂನ್​ 25ರಂದು ಅಮೆರಿಕದ ಲಾಸ್​ ಏಂಜಲೀಸ್​ನಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದರು. ಜಾಕ್ಸನ್​ ಸಾವನ್ನು ಸಾಕಷ್ಟು ಮಂದಿ ನಂಬಿರಲಿಲ್ಲ. ಅನಾರೋಗ್ಯದಿಂದ ಜಾಕ್ಸನ್​ ರಹಸ್ಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು. ಹೀಗಾಗಿ ಕೆಲವರು ಜಾಕ್ಸನ್​ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಜಾಕ್ಸನ್​ ಸಾವು ಇಂದಿಗೂ ರಹಸ್ಯವಾಗಿಯೇ ಉಳಿದಿರುವುದರಿಂದ ಆಗಾಗ ಅವರ ಅಸ್ತಿತ್ವ ಬಗ್ಗೆ ಹೊಸ ಹೊಸ ಆಯಾಮಗಳು ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಆದರೆ, ಇಂದಿಗೂ ವಾಸ್ತವ ಮೈಕಲ್ ಜಾಕ್ಸನ್​ ಇಲ್ಲ ಎಂದೇ ಜನರು ನಂಬಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply