Connect with us

  LATEST NEWS

  ಸಮುದ್ರದ ಗರ್ಭದಲ್ಲಿ ಭಗವಾನ್ ಶ್ರೀಕೃಷ್ಣನ ‘ದ್ವಾರಕಾ’ ಪ್ರಧಾನಿ ಮೋದಿ ವೀಕ್ಷಿಸಿದ ಹಲವು ನಿಗೂಢ ರಹಸ್ಯಗಳ ತಾಣ..!

  ದ್ವಾರಕಾ :  ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ದ್ವಾರಕಾದಲ್ಲಿ ಅಳವಾದ ನೀರಿನಲ್ಲಿ ಮುಳುಗಿ ದ್ವಾರಕಾಧೀಶ ದೇವಸ್ಥಾನದಲ್ಲಿ ಭಾನುವಾರ ಪ್ರಾರ್ಥನೆ ಸಲ್ಲಿಸಿ ಪುಣಿತರಾಗಿದ್ದಾರೆ. “ಆಧ್ಯಾತ್ಮಕ ಹಿರಿಮೆಯ ಪುರಾತನ ಯುಗಕ್ಕೆ ಸಂಪರ್ಕ ಹೊಂದಿದ ಅನುಭವ ಇದು” ಎಂದು ಪ್ರಧಾನಿ ಬಣ್ಣಿಸಿದ್ದಾರೆ.  ಹಾಗಾದರೆ ಏನು ‘ದ್ವಾರಕೆಯ ವಿಶೇಷ.. ?

  ದ್ವಾರಕೆಯು ಶ್ರೀಕೃಷ್ಣನ ಅಸ್ತಿತ್ವ ಮತ್ತು ಭಾರತದ ಶ್ರೀಮಂತ ಸಾಂಸ್ಕೃತಿಕ ಇತಿಹಾಸದ ಜೀವಂತ ಪುರಾವೆಯಾಗಿದೆ. ಸುಮಾರು 5000 ವರ್ಷಗಳಿಗೂ ಹಿಂದೆ ಸಮುದ್ರದಲ್ಲಿ ಮುಳುಗಿ ಹೋಗಿರುವ ದ್ವಾರಕಾ ನಗರದ ಅವಶೇಷಗಳು ಗುಜರಾತಿನ ಸಮುದ್ರದಲ್ಲಿ ಇಂದಿಗೂ ಕಾಣಸಿಗುತ್ತದೆ. ಕೃಷ್ಣಾವತಾರದ ಕಥೆಗಳಲ್ಲಿ ದ್ವಾರಕಾ ನಗರದ ಬಗ್ಗೆ ಕೂಡ ವರ್ಣನೆ ಕಂಡುಬರುತ್ತದೆ.

  ಶ್ರೀ ಕೃಷ್ಣನ ನಂತರ ಕೆಲವು ವರ್ಷದಲ್ಲಿ ದ್ವಾರಕ ಮುಳುಗಿದ್ದು, ಆಗಿನ ಶಿಲೆಗಳು ಅವಶೇಷಗಳು ಇಂದಿಗೂ ಸಮುದ್ರ ಗರ್ಭದಲ್ಲಿ ಇದೆ. ಗುಜರಾತ್‌ನ ಜಾಮ್ ನಗರದ ಅರೇಬಿಯಾ ಮಹಾಸಮುದ್ರದಲ್ಲಿ ಸುಮಾರು 150 ಅಡಿ ಆಳದಲ್ಲಿ ಈ ದ್ವಾರಕಾ ನಗರವಿದೆ. ಪುರಾತನ ನಗರಗಳಲ್ಲಿ ಒಂದಾಗಿರುವ ಶ್ರೀ ಕೃಷ್ಣನ ಊರಾದ ದ್ವಾರಕಾ ಚಾರ್‌ಧಾಮ(ನಾಲ್ಕು ಧಾಮ) ಗಳಲ್ಲಿ ಒಂದಾಗಿದೆ ಎಂದು ಧರ್ಮ ಗ್ರಂಥಗಳಲ್ಲಿ ಹೇಳಲಾಗಿದೆ. ಕೃಷ್ಣನು ಮಥುರೆಯಲ್ಲಿ ಯುದ್ದವನ್ನು ಪರಿತ್ಯಜಿಸಿ ದ್ವಾರಕೆಗೆ ಬಂದು ತನ್ನ ಸಾಮ್ರಾಜ್ಯಕ್ಕೆ ಬೆಯ್ಟ್ ದ್ವಾರಕ ಎನ್ನುವಲ್ಲಿ ಬುನಾದಿಯನ್ನು ಹಾಕಿದನು. ಇದು ಓಕಾ ಬಂದರಿನ ಸಮೀಪದಲ್ಲಿದೆ.

  ಇಲ್ಲಿ ಕೃಷ್ಣ ತನ್ನ ಜೀವನದ ಬಹುಭಾಗವನ್ನು ಕಳೆದನು. ಕೃಷ್ಣನ ಮರಣದ ನಂತರ ಈ ನಗರವು ಮುಳುಗಿತು. ಮಹಾಭಾರತದ ಮೂರನೇ ಅಧ್ಯಾಯದಲ್ಲಿ 125 ವರ್ಷಗಳ ನಂತರ ಶ್ರೀ ಕೃಷ್ಣ ಈ ಭೂಮಿಯನ್ನು ಸ್ವರ್ಗಕ್ಕೆ ಬಿಟ್ಟಾಗ, ಸಮುದ್ರದ ನೀರು ದ್ವಾರಕಾವನ್ನು ಹೀರಿಕೊಳ್ಳುತ್ತದೆ ಎಂದು ಉಲ್ಲೇಖಿಸಲಾಗಿದೆ. ಹಾಗೆಯೇ. ಕೃಷ್ಣನು ತನ್ನ 18 ಸಹಚರರೊಂದಿಗೆ ದ್ವಾರಕೆಗೆ ಬಂದನೆಂದು ಹೇಳಲಾಗುತ್ತದೆ. ಶ್ರೀಕೃಷ್ಣನು 36 ವರ್ಷಗಳ ಕಾಲ ಇಲ್ಲಿ ಆಳ್ವಿಕೆ ನಡೆಸಿದ್ದರು.

  ದ್ವಾರಕಾ ನಗರ ನಿರ್ಮಾಣ ಯಾರದ್ದು?

  ಪುರಾಣಗಳ ಪ್ರಕಾರ ಈ ನಗರವನ್ನು ಸಾಕ್ಷಾತ್ ಶ್ರೀ ಕೃಷ್ಣ ನಿರ್ಮಾಣ ಮಾಡಿದ್ದಾರೆ. ಚರಿತ್ರೆಕಾರರ ಪ್ರಕಾರ ದ್ವಾರಕಾ ನಗರವು ಸರಿಸುಮಾರು 9,000 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಸೌರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿ ಸುಂದರವಾದ ನಗರವನ್ನು ನಿರ್ಮಿಸಲು ಶ್ರೀಕೃಷ್ಣನು ವಿಶ್ವಕರ್ಮನನ್ನು (ನಿರ್ಮಾಣದ ದೇವತೆ) ಕರೆದನು.

  ವಿಶ್ವಕರ್ಮನು ಭವ್ಯವಾದ ನಗರವನ್ನು ನಿರ್ಮಿಸಲು ಸಮುಂದ್ರ ದೇವನಿಂದ (ಸಮುದ್ರದ ಆಹಾರ) 12 ಯೋಜನಗಳಷ್ಟು ಭೂಮಿಯನ್ನು ಕೋರಲು ಶ್ರೀಕೃಷ್ಣನನ್ನು ಕೇಳಿದನು. ಶ್ರೀಕೃಷ್ಣನು ವಿಶ್ವಕರ್ಮನು ಸೂಚಿಸಿದಂತೆ ಮಾಡಿದನು ನಂತರ ವಿಶ್ವಕರ್ಮನು ಚಿನ್ನ, ವಜ್ರಗಳು, ಮಾಣಿಕ್ಯಗಳು ಮತ್ತು ಅಮೂಲ್ಯವಾದ ಲೋಹಗಳಿಂದ ಹುದುಗಿರುವ ದ್ವಾರಕಾ ನಗರವನ್ನು ನಿರ್ಮಿಸಿದನು. ಭಗವಾನ್ ಕೃಷ್ಣನ ಆಳ್ವಿಕೆಯಲ್ಲಿ, ದ್ವಾರಕಾವು ಆಕರ್ಷಕ ಕೊಳಗಳು, ಮೋಡಿಮಾಡುವ ಉದ್ಯಾನಗಳು, ಆಳವಾದ ಕಂದಕಗಳು ಮತ್ತು ವಾಸ್ತುಶಿಲ್ಪದ ಅರಮನೆಗಳೊಂದಿಗೆ ಬಹಳ ಸುಂದರವಾಗಿತ್ತು ಎಂದು ಹೇಳಲಾಗುತ್ತದೆ.

  ಪುರಾಣದಲ್ಲಿ ತಿಳಿಸಿದ ಪ್ರಕಾರ ಮಹಾಭಾರತದ ಕುರುಕ್ಷೇತ್ರ ಯುದ್ದ ನಡೆದ ಬಳಿಕ ಮೂವತ್ತಾರು ವರ್ಷಗಳ ನಂತರ ಈ ನಗರ ಸಮುದ್ರದಲ್ಲಿ ಮುಳುಗಿ ಹೋಗಿದೆ. ಈ ರೀತಿ ಆಗಲು ಮುಖ್ಯ ಕಾರಣ ಗಾಂಧಾರಿ ಶ್ರೀ ಕೃಷ್ಣನಿಗೆ ಕೊಟ್ಟ ಶಾಪ. ಹಾಗೆಯೇ ಋಷಿಮುನಿ ಒಬ್ಬರು ಶ್ರೀಕೃಷ್ಣನ ಮಗನಾದ ಸಾಂಬಾನಿಗೆ ಕೊಟ್ಟ ಶಾಪ ಎಂದು ಪುರಾಣದಲ್ಲಿ ಹೇಳಲಾಗಿದೆ. ಇಂತಹ ಕಥೆಗಳ ಆಧಾರದ ಮೇಲೆ ಚರಿತ್ರಕಾರರು ಈ ನಗರವು ನೀರಿನಲ್ಲಿ ಮುಳುಗಿ ಹೋಗಿದೆ ಎನ್ನುವುದನ್ನು ನಂಬಿ ಅದನ್ನು ಕಂಡುಕೊಳ್ಳಲು ಹುಡುಕಾಟ ನಡೆಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಇದರ ಅವಶೇಷಗಳು ಗುಜರಾತಿನ ಸಮೀಪದ ಅರೇಬಿಯ ಸಮುದ್ರದಲ್ಲಿ ಸಿಕ್ಕಿವೆ. ದ್ವಾರಕ ನಗರದ ವಿಶೇಷತೆ ಏನೆಂದರೆ ಈ ನಗರಕ್ಕೆ ಅನೇಕ ದ್ವಾರಗಳು ಇವೆ. ಹಾಗು ಚರಿತ್ರೆಕಾರರ ಕೊಟ್ಟಿರುವ ವರದಿ ಪ್ರಕಾರ ಆ ದ್ವಾರಗಳಿಗೆ ಸಂಬಂಧಪಟ್ಟ ಅವಶೇಷಗಳು ಇನ್ನು ಇದೆ ಎಂದು ಗೊತ್ತಾಗುತ್ತದೆ.

  ಅಲ್ಲಿ ಶ್ರೀ ಕೃಷ್ಣನ ದೇಹವಿದೆ
  ಅಲ್ಲಿ ಶ್ರೀ ಕೃಷ್ಣನ ದೇಹವಿದೆ ಎನ್ನುವ ಪ್ರತೀತಿ ಈಗಲೂ ಇದೆ.ಇಲ್ಲಿಗೆ ಸೇರಬೇಕು ಎಂದರೆ ಸಮುದ್ರ ಮಾರ್ಗದಿಂದ ಮಾತ್ರ ಹೋಗಬೇಕಾಗುತ್ತದೆ. 2005ರಲ್ಲಿ ಭಾರತದ ಆರ್ಕಿಯಾಲಜಿಸ್ಟ್ ಗಳ ಮೂಲಕ ದ್ವಾರಕ ನಗರದ ಇರುವನ್ನು ಕಂಡು ಕೊಳ್ಳಲಾಗಿದೆ.

  ಒಂದು ಕಡೆ ಶ್ರೀರಾಮನ  ಭವ್ಯವಾದ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಿಸಲಾಗಿದೆ. ಮತ್ತೊಂದೆಡೆ, ಈಗ ಶ್ರೀಕೃಷ್ಣನ ಇತಿಹಾಸವನ್ನು ಪ್ರಪಂಚದ ಮುಂದೆ ಪ್ರಸ್ತುತಪಡಿಸಲು ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಶ್ರೀ ಕೃಷ್ಣನ ನಗರವಾದ ದ್ವಾರಕಾ ಸಮುದ್ರದಲ್ಲಿ ಮುಳುಗಿದೆ ಎಂದು ಹೇಳಲಾಗುತ್ತಿರುವ ಪ್ರಾಚೀನ ದ್ವಾರಕೆಯ ಅವಶೇ಼ಷಗಳನ್ನು ಕಣ್ತುಂಬಿಕೊಳ್ಳಲು  ಕೇಂದ್ರ ಸರ್ಕಾರ  ಗುಜರಾತ್ ಸರ್ಕಾದ ಸಹಭಾಗಿತ್ವದಲ್ಲಿ ಮೇಗಾ ಯೋಜನೆಯೊಂದನ್ನು ಸಿದ್ದಪಡಿಸುತ್ತಿದೆ.

   

  Share Information
  Advertisement
  Click to comment

  You must be logged in to post a comment Login

  Leave a Reply