KARNATAKA
ಷೇರು ಮಾರುಕಟ್ಟೆಯಲ್ಲಿ ಐಪಿಒ ಎಂದರೇನು? IPO (Initial Public Offering)
IPO ಅಂದರೆ, ಯಾವುದೇ ಒಂದು ಖಾಸಗಿ ಕಂಪನಿಯು ತನ್ನ ಕಂಪನಿಯ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ, ಪಬ್ಲಿಕ್ ಕಂಪನಿಯಾಗಿ ಮುಂದಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ನೋಂದಣಿ ಮಾಡಿ ವ್ಯಾಪಾರ ಮಾಡಲಾಗುತ್ತದೆ. ಈ ನೋಂದಣಿಗೆ ಪ್ರಮುಖ ಕಾರಣವೆಂದರೆ ಬಂಡವಾಳದ ಅವಶ್ಯಕತೆ. ಹೀಗೆ ಸಾರ್ವಜನಿಕರಿಂದ ಬಂದ ದುಡ್ಡನ್ನು ಬಂಡವಾಳವಾಗಿ ಸಂಗ್ರಹಿಸಿ ಕಂಪನಿಯ ಅಭಿವೃದ್ಧಿಗೆ ಉಪಯೋಗಿಸುಲಾಗುತ್ತದೆ.
ಹಾಗಿದ್ದರೆ ಬ್ಯಾಂಕ್ಗಳಿಂದ ಸಾಲ ಪಡೆಯಬಹುದಲ್ಲ ಎಂದು ನಾವು ಯೋಚಿಸಬಹುದು, ಆದರೆ ಅವರು ಹಾಗೆ ಮಾಡದಿರಲು ಕಾರಣ ಬ್ಯಾಂಕುಗಳಿಂದ ಪಡೆದ ಸಾಲದ ಮರುಪಾವತಿಯನ್ನು ನಿಗದಿತ ಸಮಯದಲ್ಲಿ ನಿಗದಿತ ಬಡ್ಡಿಯೊಂದಿಗೆ ಹಿಂದಿರುಗಿಸ ಬೇಕು. ಅದಕ್ಕಾಗಿ ಕಂಪನಿಗಳು IPO ಗೆ ಬರಲು ಇಚ್ಚಿಸುತ್ತವೆ. ಕಂಪನಿಯು ಅದರ ಷೇರುದಾರರನ್ನು ಪಾಲುದಾರರಾಗಿ (Partners) ಮಾಡುತ್ತದೆ ಮತ್ತು ಅದರಿಂದ ಉಂಟಾಗುವ ಅಪಾಯವನ್ನು ಸಹ ಪಾಲುದಾರರು ಅಂದರೆ ಬಂಡವಾಳ ಹೂಡಿದವರ ಜೊತೆ ಹಂಚಿಕೊಳ್ಳುತ್ತದೆ.
ಹೆಚ್ಚಾಗಿ ಕಂಪನಿಗಳು ಈ ಕೆಳಗೆ ನಮೂದಿಸಿರುವ ಕಾರಣಗಳಿಗಾಗಿ “ಐಪಿಒ”ದ ಮೊರೆ ಹೋಗುತ್ತಾರೆ.
1. ಕಂಪನಿಯು ಹೊಸ ಅಥವಾ ಇರುವ ಪ್ರಾಜೆಕ್ಟ್ ಗಾಗಿ ಕಂಪನಿಗಳು IPO ಫೈಲ್ ಮಾಡಿ ಬಂಡವಾಳ ಹೂಡುತ್ತದೆ.
2. ಕಂಪನಿಯು ಈಗಾಗಲೇ ಹೊಂದಿರುವ ಸಾಲವನ್ನು ಮರು ಪಾವತಿ ಮಾಡಲು IPO ಫೈಲ್ ಮಾಡುತ್ತದೆ.
3. ಕಂಪನಿಯು ಶುರುವಾದಾಗ, ಈ ಕಂಪನಿಗಳಿಗೆ ದೊಡ್ಡ ಮಟ್ಟದ ಹೂಡಿಕೆದಾರರು ಹೂಡಿಕೆ ಮಾಡಿರುತ್ತಾರೆ. ತಾವು ಈ ಕಂಪನಿಯಿಂದ ಹೊರನಡೆಯಲು ಯೋಚನೆ ಮಾಡಿದಾಗ, ತಮ್ಮ ಷೇರುಗಳನ್ನು ಯರಿಗಾದರು ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ಸಲುವಾಗಿಯೂ IPO ಫೈಲ್ ಮಾಡುತ್ತದೆ.
ಹೇಗೆ ಐಪಿಒ ಅರ್ಜಿ ಸಲ್ಲಿಕೆ ?
ಹೀಗೆ ಈ ವರ್ಷ ಅಂತೂ ತುಂಬಾ ಕಂಪನಿಗಳು ಐಪಿಒ ದ ಮೊರೆಹೋಗಿದೆ. ಹೆಚ್ಚಾಗಿ ಈ ಷೇರುಗಳು ಷೇರು ಮಾರುಕಟ್ಟೆಯಲ್ಲಿ ನೋಂದಾಯಿಸುವ ಮೊದಲು ಕಡಿಮೆ ದರದಲ್ಲಿ ದೊರೆಯುತ್ತದೆ. ಅದಕ್ಕಾಗಿ ವಿವಿಧ ಬ್ಯಾಂಕ್ ಅಥವಾ ಬ್ರೋಕರ್ಸ್ ಗಳ ಮುಖಾಂತರ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಪ್ರಕಾರ ಹಂಚಲಾಗುತ್ತದೆ. ಇದಾದ ನಂತರ ಮಾರುಕಟ್ಟೆಯಲ್ಲಿ ನೋಂದಾಯಿಸುತ್ತಾರೆ. ಈ ದಿನವನ್ನು ಮೊದಲೇ ತಿಳಿಸುತ್ತಾರೆ. ಹೆಚ್ಚಾಗಿ ನಿಮಗೆ ಐಪಿಒ ಸಿಕ್ಕಿದರೆ ಬಂಪರ್ ಲಾಭ ಸಿಕ್ಕಿದಂತೆ. ಏಕೆಂದರೆ Sigachi Industries Ltd ಎನ್ನುವ ಕಂಪನಿ ಇತ್ತೀಚೆಗೆ ಐಪಿಒವನ್ನು ಒಂದು ಶೇರ್ ನ ಬೆಲೆ 163 ರೂಪಾಯಿಯಂತೆ ನಿಗದಿಪಡಿಸಿತ್ತು. ಅನಂತರ ನೋಂದಾಯಿಸುವಾಗ ಪ್ರತೀ ಶೇರ್ ನ ಬೆಲೆ 575 ರೂಪಾಯಿಯಂತೆ ನಿಗದಿಪಡಿಸಲಾಯಿತು. ಇದರಿಂದ ಹೂಡಿಕೆದಾರನಿಗೆ 252.8% ಲಾಭ ದೊರೆತಂತೆ ಆಯಿತು. ಹಾಗಂತ ಎಲ್ಲ ಕಂಪನಿಗಳು ಹೀಗೆ ಲಾಭ ಕೊಡಬೇಕೆಂದೇನಿಲ್ಲ. ಉದಾಹರಣೆಗೆ ಇತ್ತೀಚೆಗೆ ಕಾರ್ ಟ್ರೇಡ್ ಎನ್ನುವ ಕಂಪನಿ ಒಂದು ಶೇರ್ ನ ಬೆಲೆ 1918 ರೂಪಾಯಿಯಂತೆ ನಿಗದಿಪಡಿಸಿತ್ತು. ಅನಂತರ ನೋಂದಾಯಿಸುವಾಗ ಪ್ರತೀ ಶೇರ್ ನ ಬೆಲೆ 1901ರೂಪಾಯಿಯಂತೆ ನಿಗದಿಪಡಿಸಲಾಯಿತು.ಅಂದರೆ ಒಂದು ಶೇರ್ ಗೆ ಹೂಡಿಕೆದಾರನಿಗೆ 17 ರೂಪಾಯಿ ನಷ್ಟ ಸಂಭವಿಸಿತು. ಅದೇ ಶೇರ್ ನ ಈಗಿನ ಬೆಲೆ 1085. ಅಂದರೆ ಒಂದು ಶೇರ್ ನ ಮೇಲೆ 533 ರೂಪಾಯಿ ನಷ್ಟವಾಯಿತು.
ಹೀಗಂತ ಎಲ್ಲ ಬಾರಿಯೂ ನಷ್ಟವೇ ಸಂಭವಿಸುತ್ತದೆ ಅಥವಾ ಲಾಭವೇ ಗಳಿಸುತ್ತೇವೆ ಎಂದೇನಿಲ್ಲ.ಕಷ್ಟ ಪಟ್ಟು ದುಡಿದ ದುಡ್ಡನ್ನು ಸರಿಯಾಗಿ ಯೋಚಿಸಿ ಬಹಳ ಎಚ್ಚರಿಕೆಯಿಂದ ಬಂಡವಾಳ ಹೂಡಿಕೆ ಮಾಡಿ.
ಈ ಶೇರ್ ನ ಮೇಲೆ ಹೇಗೆ ತೆರಿಗೆ ವಿಧಿಸುಲಾಗುತ್ತದೆ ಎಂಬುದನ್ನು ನನ್ನ ಮುಂದಿನ ಲೇಖನದಲ್ಲಿ ನಿರೀಕ್ಷಿಸಿ.
ಸಚಿನ್ ಕೃಷ್ಣ ಭಟ್
You must be logged in to post a comment Login