ಕೆನಾನ್ ಕಂಪೆನಿ ಹೊಸ ಪೀಳಿಗೆಯ, ಬಹುಕೆಲಸಗಳನ್ನು ಮಾಡುವ ಯಂತ್ರಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಯಂತ್ರಗಳನ್ನು ಬಳಸಿ ನೆರಳಚ್ಚುಪ್ರತಿ ಮಾಡುವುದು, ಗಣಕದ ಮೂಲಕ ಮುದ್ರಿಸುವುದು ಹಾಗೂ ಸ್ಕ್ಯಾನ್ ಮಾಡಬಹುದು. ಇಂತಹವುಗಳಿಗೆ ಇಂಗ್ಲಿಷ್ ನಲ್ಲಿ multi-function devices ಎನ್ನುತ್ತಾರೆ. ಕಾನನ್ ಕಂಪೆನಿಯವರ ಪ್ರಕಾರ ಇದು ಅವರ ಮೂರನೆ ತಲೆಮಾರಿನ ಯಂತ್ರಗಳು. ಅವರು ಇದನ್ನು Image Runner Advance ಶ್ರೇಣಿ ಎಂದು ಕರೆದಿದ್ದಾರೆ. ಕೆನಾನ್ ಕಂಪೆನಿ ಭಾರತದಲ್ಲಿ ತನ್ನ ವ್ಯವಹಾರ ಪ್ರಾರಂಭಿಸಿ 20 ವರ್ಷಗಳನ್ನು ಪೂರೈಸಿದೆ.