Connect with us

    TECHNOLOGY

    ಸ್ಮಾರ್ಟ್ ಫೋನ್ ಸ್ಮಾರ್ಟ್ ಕಲಿಕೆಗೆ ಬಳಕೆ

    ಸ್ಮಾರ್ಟ್ ಫೋನ್ ಸ್ಮಾರ್ಟ್ ಕಲಿಕೆಗೆ ಬಳಕೆ

    ನಮಗೆ ಹೊಸತೊಂದು ಭಾಷೆ ಕಲಿಯಲು ಇರಬಹುದು ಅಥವ ಹೊಸತೊಂದು ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಲು ಇರಬಹುದು ಆದರೆ ಈಗ ಪುಸ್ತಕ ಕೊಂಡು ಕಲಿಯುವ ಅವಶ್ಯಕತೆಯಿಲ್ಲ ನಮಗಿಲ್ಲ.

    ಟ್ಯುಟೋರಿಯಲ್ ,ಕೋಚಿಂಗ್ ಸೆಂಟರ್ ಗಳಿಗೆ ಹೋಗುವ ಅವಶ್ಯಕತೆಯೂ ಇಲ್ಲ.

    ನಿಮ್ಮಲ್ಲಿರುವ ಸ್ಮಾರ್ಟ್ ಫೋನಿನಲ್ಲಿಯೇ ಕಲಿಕೆಗೆ ಹಲವು ಆಪ್ ಗಳು ಲಭ್ಯ. ವಿಶೇಷವಾಗಿ ಸಣ್ಣ ಊರುಗಳಲ್ಲಿ ನೆಲೆಸಿರುವವರಿಗೆ ಸಾಧಾರಣವಾಗಿ ಕೋಚಿಂಗ್ ಸೆಂಟರುಗಳು ನಿಲುಕದೆ ಬೆಂಗಳೂರಿಗೆ ಬಂದು ಕಲಿಯಬೇಕಾಗಿದ್ದ ಹಲವು ವಿಷಯಗಳು ಈಗ ಸ್ಮಾರ್ಟ್ ಫೋನು ಮೂಲಕ ಸುಲಭದಲ್ಲಿ ಲಭ್ಯ.

    ಪ್ರೋಗ್ರಾಮಿಂಗ್ ಕಲಿಯುವುದರಿಂದ ಹಿಡಿದು ರೇಕಿ ಕಲಿಯುವುದರವರೆಗೂ ಎಲ್ಲ ರೀತಿಯ ಕೋರ್ಸುಗಳು ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್ ಫೋನಿನಲ್ಲಿಯೇ ಆಪ್ ಗಳ ಮೂಲಕ ಲಭ್ಯ.

    ಉದಾಹರಣೆಗಾಗಿ..

    Udacity:

    2012 ರಲ್ಲಿ ಪ್ರಾರಂಭವಾದ ಯುಡಾಸಿಟಿ, ಗೂಗಲ್, ಫೇಸ್ಬುಕ್ ಮುಂತಾದ ಅತಿ ದೊಡ್ಡ ಕಂಪೆನಿಗಳೊಡಗೂಡಿ ಕೆಲವೊಂದು ಕೋರ್ಸುಗಳನ್ನು ಉಚಿತವಾಗಿ ನೀಡುತ್ತಿದೆ. ಜೊತೆಗೆ ನ್ಯಾನೋ ಡಿಗ್ರೀ’ ಎಂಬ ಸರ್ಟಿಫಿಕೇಶನ್ ಪ್ರೋಗ್ರಾಂ ಒಂದನ್ನು ಕೂಡ ಪ್ರಾರಂ ಭಿಸಿದೆ. ಇತ್ತೀಚೆಗೆ ನ್ಯಾನೋ ಡಿಗ್ರಿ ಪಡೆದುಕೊಂಡಿರುವ ವಿದ್ಯಾರ್ಥಿಗಳಿಗೆ ಸಂದರ್ಶಕರು ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಕಾಲೇಜಿನಲ್ಲಿ ನಾಲ್ಕು ವರ್ಷಗಳ ಕಾಲ ಕಲಿಯದಿದ್ದ ವಿಷಯಗಳನ್ನು ಈ ನ್ಯಾನೋ ಡಿಗ್ರಿಯಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ನ್ಯಾನೊ ಡಿಗ್ರಿ ಎನ್ನುವುದನ್ನು ಬಿಟ್ಟರೆ ಕಲಿಕೆಯಲ್ಲದೆ ಮತ್ತೇನೂ  ಈ ಕೋರ್ಸುಗಳಲ್ಲಿ ಸಿಗದು. ಹೀಗಾಗಿ ಈ ಕೋರ್ಸುಗಳನ್ನು ನಿಜವಾದ ಕಲಿಕೆ ಬಯಸಿ ಹೊರಟವರು ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದಾರೆ.
    ಡಿಜಿಟಲ್ ಮಾರ್ಕೆಟಿಂಗ್, ರೊಬೊಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮುಂತಾದ ವಿಷಯಗಳ ಕೋರ್ಸುಗಳು ಇದರಲ್ಲಿ ಲಭ್ಯ. ಇದಲ್ಲದೆ ಯುಡಾಸಿಟಿಯಲ್ಲಿ ಇನ್ನೂ ನೂರಾರು ವಿಷಯಗಳ ಕುರಿತು ಕಲಿಯಬಹುದಾಗಿದೆ. ಅದು ಸೆಲ್ಫ್ ಡ್ರೈವಿಂಗ್ ಕಾರುಗಳ ಬಗ್ಗೆ ಇರಬಹುದು ಅಥವ ವರ್ಚ್ಯುಯಲ್ ರಿಯಾಲಿಟಿ ಅಥವ ಡಿಸೈನ್ ಕುರಿತಾದದ್ದಾಗಿರಬಹುದು. ತಂತ್ರಜ್ಞಾನ ಕಲಿಯುವ ಆಸಕ್ತಿ ಇರುವವರಿಗೆ, ವಿಶೇಷವಾಗಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಬಹುದಾದ ಆಪ್ ಇದು.

    Duolingo:

    ಶಾಲೆಯಲ್ಲಿದ್ದಾಗ ನನಗೆ ಜರ್ಮನ್ ಕಲಿಯಲು ತುಂಬ ಆಸೆಯಿತ್ತು. ಆದರೆ ಜರ್ಮನ್ ಕಲಿಸುತ್ತಿದ್ದ ಟ್ಯುಟೋರಿಯಲ್ ಇದ್ದದ್ದು ಅತಿ ದೂರದ ಜಾಗವೊಂದರಲ್ಲಿ. ಅದಲ್ಲದೆ ಅವರು ಚಾರ್ಜ್ ಮಾಡುವ ಫೀಸು ಕೇಳಿ ತಂದೆಯವರು ಬೇಡವೆಂದುಬಿಟ್ಟರು. ಕೆಲವು ವರ್ಷಗಳ ಹಿಂದೆಯಷ್ಟೆ ಮತ್ತೊಮ್ಮೆ ಜರ್ಮನ್ ಕಲಿಯಲು ಇಂಟರ್ನೆಟ್ಟಿನಲ್ಲಿ ಏನಾದರೂ ಸಿಗಬಹುದೆ ಎಂದು ಹುಡುಕುತ್ತಿರುವಾಗ ನನ್ನ ಕಣ್ಣಿಗೆ ಬಿದ್ದದ್ದು ಈ ಡ್ಯುಓ ಲಿಂಗೋ ಎನ್ನುವ ಜನಪ್ರಿಯ ಆಪ್. ಭಾಷೆಗಳನ್ನು ತೀರ ಸುಲಭವಾಗಿ ಕಲಿಸಬಹುದಾದ ವಿಧಾನಗಳನ್ನು ಅನುಸರಿಸಿ ಈ ಆಪ್ ಅಭಿವೃದ್ಧಿಪಡಿಸಿದವರು ಜೊತೆಗೇ ತಂತ್ರಜ್ಞಾನವನ್ನೂ ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡಿದ್ದಾರೆ. ಪದದ ಅರ್ಥವೇನು ಎಂಬುದರ ಪ್ಲೇಕಾರ್ಡ್ ಜೊತೆಗೆ ಅಯಾ ಪದವನ್ನು ಹೇಗೆ ಉಚ್ಚರಿಸಬೇಕೆಂಬುದನ್ನೂ ತಿಳಿಸಿಕೊಡುತ್ತದೆ, ಈ ಆಪ್.
    ಒಮ್ಮೆ ಈ ಆಪ್ ಬಳಸಿ ಕಲಿಯಲು ಪ್ರಾರಂಭಿಸಿದರೆ ಕಲಿಯುವ ತನಕ ಅದೇ ನಿಮ್ಮ ಬೆನ್ನು ಹತ್ತಿ ಕಲಿಸುವಷ್ಟು ಶ್ರಮವಹಿಸುತ್ತದೆ. ನಿತ್ಯ ನಿಮ್ಮ ಫೋನಿನಲ್ಲಿ ಒಂದಲ್ಲ ಒಂದು ಹೊಸ ಸಂದೇಶ ಕಳುಹಿಸುತ್ತ ನಿಮ್ಮನ್ನು ಕಲಿಕೆಯಲ್ಲಿ ತೊಡಗಿಸುತ್ತದೆ. ಒಂದು ಹಂತದ ಕಲಿಕೆಯವರೆಗೂ ಈ ಆಪ್ ಉಚಿತವೂ ಹೌದು.

    coursera:

    2012ರಲ್ಲಿ ಸ್ಟಾನ್ಫರ್ಡ್ ಪ್ರೊಫೆಸರುಗಳಾದ ಡಾಫ್ನೆ ಕಾಲರ್ ಹಾಗೂ ಆಂಡ್ರ್ಯೂ ಪ್ರಾರಂಭಿಸಿದ ವೇದಿಕೆ ಈಗ ಕೋರ್ಸೆರ ಆಪ್ ಮೂಲಕ ನೂರಾರು ಕೋರ್ಸುಗಳನ್ನು ಕಲಿಯಲು ಆಸಕ್ತಿಯುಳ್ಳವರಿಗೆ ಒದಗಿಸುತ್ತಿದೆ. ಸ್ಟಾನ್ಫರ್ಡ್ ಪ್ರೊಫೆಸರುಗಳಿಂದ ಹಿಡಿದು ಹಲವು ಖ್ಯಾತ ಶಿಕ್ಷಣತಜ್ಞರು ತಯಾರಿಸಿರುವ ಕೋರ್ಸುಗಳು ಇದರಲ್ಲಿ ಲಭ್ಯವಿದೆ.

    Udemy:

    ಯುಡೆಮಿ 2010 ರಲ್ಲಿ ಪ್ರಾರಂಭವಾದ ಒಂದು ಕಂಪೆನಿ. 2007ರಲ್ಲಿ ಟರ್ಕೀ ದೇಶದ ಎರೆನ್ ಬಾಲಿ ಎಂಬುವವರು ಬರೆದಿಟ್ಟ ತಂತ್ರಾಂಶ ಹೀಗೆ ಯುಡೆಮಿ ಲರ್ನಿಂಗ್ ಪ್ಲಾಟ್ಫಾರ್ಮ್ ಆಯಿತು. ಯುಡೆಮಿ ಆಪ್ ಆಂಡ್ರಾಯ್ಡ್ ಹಾಗೂ ಐ ಓ ಏಸ್ ಎರಡರಲ್ಲೂ ಲಭ್ಯವಿದೆ. ಡಿಸೈನ್, ಮಾರ್ಕೆಟಿಂಗ್, ಮ್ಯಾನೇಜ್ಮೆಂಟ್ – ಇವುಗಳಿಂದ ಹಿಡಿದು ಸಂಗೀತ ಕಲಿಯುವ ಕೋರ್ಸುಗಳೂ ಇದರಲ್ಲಿ ನಿಮಗೆ ಸಿಗುತ್ತವೆ.
    ಕಲಿಸಲು ಆಸಕ್ತಿ ಇರುವ ಶಿಕ್ಷಕರು ಕೂಡ ಇದರಲ್ಲಿ ಪಾಲ್ಗೊಳ್ಳಬಹುದು. ಕಲಿಸುವುದರ ಜೊತೆಗೆ ಒಂದಷ್ಟು ಸಂಪಾದನೆಯೂ ಕಾಣುವ ಅವಕಾಶವಿದೆ.

    Share Information
    Advertisement
    Click to comment

    You must be logged in to post a comment Login

    Leave a Reply