ರಿಲಯನ್ಸ್ ನಿಂದ ಜಿಯೋ ಸಿಮ್ ಇರುವ ಅಗ್ಗದ ಲ್ಯಾಪ್ ಟಾಪ್

ಮಂಗಳೂರು ಎಪ್ರಿಲ್ 12: ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೆ ಮಾಡಿದ ಜಿಯೋ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಅದೇ ಕಡಿಮೆ ಬೆಲೆಯಲ್ಲಿ ಜಿಯೋ ಸಿಮ್ ಹೊಂದಿದ ಲ್ಯಾಪ್ ಟಾಪ್ ಬಿಡುಗಡೆ ಮಾಡಲು ಮುಂದಾಗಿದೆ.

ಮೊಬೈಲ್ ಪ್ರೊಸೆಸರ್ ತಯಾರಿಕೆ ಕಂಪೆನಿ ಕ್ವಾಲ್ಕಾಮ್ ಜೊತೆ ಮಾತುಕತೆ ನಡೆಸಿರುವ ರಿಲಾಯನ್ಸ್ ಜಿಯೋ, ವಿಂಡೋಸ್ 10 ಆಪರೇಟಿಂಗ್ ವ್ಯವಸ್ಥೆ ಇರುವ ಲ್ಯಾಪ್ ಟಾಪ್ ಗಳಲ್ಲಿ ಜಿಯೋ ಸಿಮ್ ಗಳನ್ನು ಆಳವಡಿಸುವುದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.

ಈ ಮೊದಲು ಮೈಕ್ರೋಸಾಪ್ಟ್ ಕಂಪೆನಿ ಕಳೆದ ವರ್ಷ ಸದಾ ಇಂಟರ್ ನೆಟ್ ಸಂಪರ್ಕ ಇರುವ ಲ್ಯಾಪ್ ಟಾಪ್ ಗಳನ್ನು ಎಚ್ ಪಿ ಮತ್ತು ಆಸುಸ್ ಕಂಪೆನಿಗಳ ಮೂಲಕ ಮಾರುಕಟ್ಟೆ ಬಿಟ್ಟಿತ್ತು. ಸುಮಾರು 10 ಗಂಟೆಗಳ ಬ್ಯಾಟರಿ ಬಾಳಿಕೆ ಈ ಲ್ಯಾಪ್ ಟಾಪ್ ಗಳಲ್ಲಿತ್ತು. ಆದರೆ ಈ ಲಾಪ್ ಟಾಪ್ ಗಳು ತುಂಬಾ ದುಬಾರಿಯಾಗಿತ್ತು.

ಲ್ಯಾಪ್ ಟಾಪ್ ನೊಂದಿಗೆ ಹೊರಗಡೆ ಹೋದಾಗ ಇಂಟರ್ ನೆಟ್ ಸಂಪರ್ಕ ಬೇಕಾದರೆ ವೈಫೈ ವ್ಯವಸ್ಥೆ ಇರಬೇಕಾಗುತ್ತದೆ. ವೈಫೈ ಸಂಪರ್ಕ ಸಿಗದ ಕಡೆ ಇಂಟರ್ ನೆಟ್ ಪಡೆಯಬೇಕಾದರೆ ಮೊಬೈಲ್ ಮೂಲಕ ಹಾಟ್ ಸ್ಪಾಟ್ ಓಪನ್ ಮಾಡಿ ವೈಫೈ ಸಂಪರ್ಕ ಕಲ್ಪಿಸಬೇಕಾಗುತ್ತದೆ ಅಥವಾ ಹಾಟ್ ಸ್ಪಾಟ್ ಸಾಧನಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಎಂಬಂತೆ ಲ್ಯಾಪ್ ಟಾಪ್ ನಲ್ಲೇ ಸಿಮ್ ಅಳವಡಿಸುವ ಪ್ರಯತ್ನ ನಡೆಯುತ್ತಿದೆ.

3 Shares

Facebook Comments

comments