LATEST NEWS
ಮೊದಲ ದಿನವೇ ಲಕ್ಷಗಟ್ಟಲೆ ಡೌನ್ ಲೋಡ್ ಆದ ಬಾಬಾ ರಾಮ್ ದೇವ್ ಕಿಂಬೊಹೋ ಆ್ಯಪ್
ಮೊದಲ ದಿನವೇ ಲಕ್ಷಗಟ್ಟಲೆ ಡೌನ್ ಲೋಡ್ ಆದ ಬಾಬಾ ರಾಮ್ ದೇವ್ ಕಿಂಬೊಹೋ ಆ್ಯಪ್
ನವದೆಹಲಿ ಮೇ 31: ವಾಟ್ಸ್ ಆಪ್ ಗೆ ಪರ್ಯಾಯವಾಗಿ ಬಾಬಾ ರಾಮ್ ದೇವ್ ಬಿಡುಗಡೆ ಮಾಡಿದ ಸ್ವದೇಶಿ ಚಾಟ್ ಆ್ಯಪ್ ಮೊದಲ ದಿನವೇ 1.5 ಲಕ್ಷ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ.
ನಿನ್ನೆ ಒಂದು ದಿನಕ್ಕೆ ಪರೀಕ್ಷಾರ್ಥವಾಗಿ ಬಿಡುಗಡೆ ಮಾಡಿದ್ದ ಬಾಬಾ ರಾಮ್‍ದೇವ್ ಅವರ ಪತಂಜಲಿ ಸ್ವದೇಶಿ ಚಾಟ್ ಅ್ಯಪ್ ಕಿಂಬೊಹೋ ಅತ್ಯಧಿಕ ಡೌನ್ ಲೋಡ್ ಆಗುವ ಮೂಲಕ ಸರ್ವರ್ ನಲ್ಲಿ ತಾಂತ್ರಿಕ ದೋಷದಿಂದ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸದ್ಯ ಲಭ್ಯವಿಲ್ಲ ಎಂದು ಪತಂಜಲಿ ವಕ್ತಾರ ಎಸ್ ಕೆ ಟಿಜಾರಾವಾಲಾ ಟ್ವೀಟ್ ಮಾಡಿದ್ದಾರೆ.
ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲ್ಯಾಂಡ್ ಆದ ಮೂರು ಗಂಟೆಯಲ್ಲಿ 1.5 ಲಕ್ಷ ಮಂದಿ ಜನರು ಡೌನ್ ಲೋಡ್ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಹಾಗಾಗಿ ಗೂಗಲ್ ಪ್ಲೇ ಸ್ಟೋರ್ ಸರ್ವರ್ ನಲ್ಲಿ ತಾಂತ್ರಿಕ ದೋಷ ಎದುರಾಗಿದೆ. ಈ ನಡುವೆ ಸ್ವದೇಶಿ ನಿರ್ಮಿತ ಚಾಟ್ ಇದಾಗಿದ್ದು ಈ ಹಿನ್ನಲೆಯಲ್ಲಿ ಬಹಳಷ್ಟು ಜನ ಹೊಸ ಅ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವ ಪ್ರಯತ್ನ ಮಾಡಿ ನಿರಾಶರಾಗಿದ್ದಾರೆ.
ಇತ್ತೀಚೆಗಷ್ಟೇ ಬಾಬಾ ರಾಮ್ ದೇವ್ ಮೊಬೈಲ್ ಸಿಮ್ ಕಾರ್ಡ್ ಗಳನ್ನು ಬಿಡುಗಡೆಗೊಳಿಸಿದ್ದರು. ಈಗ ವಾಟ್ಸ್ ಆ್ಯಪ್ ಗೆ ಪರ್ಯಾಯವಾಗಿ ಸ್ವದೇಶಿ ಚಾಟ್ ಆ್ಯಪ್ ಕಿಂಬೊಹೋ ವನ್ನು ಬಿಡುಗಡೆಗೊಳಿಸಿದ್ದಾರೆ. ಈ ಆ್ಯಪ್ ನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಕಿಂಬೊಹೋ ಸಂಸ್ಕøತ ಪದ. ಇದರ ಅರ್ಥ ಹೇಗಿದಿಯಾ? ಅಥವಾ ಏನು ಸಮಾಚಾರ? ಎಂದು ಪತಂಜಲಿ ವಕ್ತಾರ ಎಸ್ ಕೆ ಟಿಜಾರಾವಾಲಾ ಟ್ವೀಟ್ ಮಾಡಿದ್ದಾರೆ.
ಈ ಆ್ಯಪ್ ನಲ್ಲಿ ಟೆಕ್ಸ್ಟ್, ಆಡಿಯೊ, ಫೋಟೋ, ವಿಡಿಯೊ, ಸ್ಟಿಕರ್ಸ್ ಹಾಗೂ ಇತರೆ ಫೈಲ್ ಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಅನಗತ್ಯ ಸಂವಾದ ಇಲ್ಲ ಯೂಸರ್ಸ್ ನ ಬ್ಲಾಕ್ ಮಾಡಬಹುದು. ಗ್ರಾಹಕರು ಇಚ್ಛೆ ಬಂದ ಫೋಟೊವನ್ನು ವಾಲ್ ಪೇಪರ್ ಆಗಿ ಮಾಡಿಕೊಳ್ಳಬಹುದಾಗಿದೆ.
You must be logged in to post a comment Login