Connect with us

    LATEST NEWS

    8ನೇ ಮಹಡಿಯಿಂದ ಬಿದ್ದು ಸಾವನಪ್ಪಿದ 5 ವರ್ಷದ ಮಗು

    8ನೇ ಮಹಡಿಯಿಂದ ಬಿದ್ದು ಸಾವನಪ್ಪಿದ 5 ವರ್ಷದ ಮಗು

    ಮಂಗಳೂರು ಮೇ 31: ಬಹುಮಹಡಿ ವಸತಿ ಸಂಕೀರ್ಣದ 8ನೇ ಮಹಡಿಯಿಂದ ಕೆಳಗೆ ಬಿದ್ದು ಮಗು ಸಾವನ್ನಪ್ಪಿದ ದಾರುಣ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ಈ ಘಟನೆ ನಡೆದಿದೆ.

    ಮೃತ ಮಗುವನ್ನು ವಿಲ್ಸನ್ ಹಾಗು ಆಲಿತಾ ದಂಪತಿಯ ಪುತ್ರಿ 5 ವರ್ಷ ಪ್ರಾಯದ ಶಾನೆಲ್ ಜೆನಿಶೀಯಾ ಡಿಸೋಜಾ ಎಂದು ಗುರುತಿಸಲಾಗಿದೆ.

    ವಿಲ್ಸನ್ ಸೆಬಾಸ್ಟಿಯನ್ ಡಿಸೋಜಾ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಪತ್ನಿ ಅಲಿತಾ ಡಿಸೋಜಾ ಹಾಗು ಪುತ್ರಿ ಶಾನೆಲ್ ಜೆನಿಶೀಯಾ ಡಿಸೋಜಾ ನಗರದ ಶಕ್ತಿನಗರದಲ್ಲಿರುವ ಬಹುಮಹಡಿ ಕ್ಲಾಸಿಕ್ ಸಫಾಯರ್ ಅಪಾರ್ಟ್ ಮೆಂಟ್ ನ 8 ನೆ ಮಹಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

    ಮಂಗಳೂರಿನಲ್ಲಿ ಸುರಿದ ಮಹಾ ಮಳೆಯ ಹಿನ್ನಲೆ ಶಾಲೆಗಳಿಗೆ 2 ದಿನ ರಜೆ ಇದ್ದ ಕಾರಣ ಶಾನೆಲ್ ಮನೆಯಲ್ಲಿಯೇ ಆಟವಾಡಿಕೊಂಡಿದ್ದಳು. ಈ ಸಂದರ್ಭ ಶಾನೆಲ್ ಫ್ಲಾಟ್ ನ ಬೆಡ್ ರೂಂ ಗೆ ತಾಗಿ ಕೊಂಡಿರುವ ವೆರಾಂಡದ ಗ್ರಿಲ್ಸ್ ಮೇಲೆ ಹತ್ತಿ ಸ್ಲೈಡರ್ ಕಿಟಕಿಯಯ ಮೂಲಕ ಕೆಳಕ್ಕೆ ಇಣುಕಲು ಯತ್ನಿಸುತ್ತಿದ್ದಾಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾಳೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಶಾನೆಲ್ ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ತಲೆ ಹಾಗು ಎದೆಯ ಭಾಗಕ್ಕಾಗ ಗಂಬೀರ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಶಾನೆಲ್ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ.

    ಈ ಘಟನೆಯ ಕುರಿತು ನಗರದ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.ಫ್ಲಾಟ್ ನ ಮಾಲಿಕರಾದ ವೀಣಾ ಎಲಿಸಾ ಸಲ್ಡಾನಾ ಅವರ ವಿರುದ್ದ ಕೂಡ ಪ್ರಕರಣ ದಾಖಲಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply