Connect with us

    TECHNOLOGY

    ಕದ್ದ ವಾಹನಗಳ ಮಾಹಿತಿಗೆ ವಾಹನ್ ಸಮನ್ವಯ್ APP

    ಮಂಗಳೂರು – ವಾಹನಗಳ ಮಾಹಿತಿ ಗಾಗಿ ವಾಹನ್ ಸಮನ್ವಯ್ ವಿನೂತನ ಆಪ್ ಅನ್ನು ಅಭಿವೃದ್ದಿ ಪಡಿಸಲಾಗಿದೆ. ಟ್ರಾಫಿಕ್ ಪೊಲೀಸ್ ಹಾಗೂ ರಾಜ್ಯ ಅಪರಾಧಿ ದಾಖಲೆಗಳ ವಿಭಾಗದ ಸಹಯೋಗದೊಂದಿಗೆ ಪೊಲೀಸ್ ಇಲಾಖೆ ಸಿದ್ದಪಡಿಸಿರುವ ರಾಷ್ಟ್ರೀಯ ಅಪರಾಧಿಗಳ ದಾಖಲೆಗಳ ಈ ಆಪ್ ವಾಹನಗಳ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ತೆರೆದಿಡುತ್ತದೆ.

    ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಆಗುವ ತೊಂದರೆಗಳಿಗೆ ಈ ಆಪ್ ಸಂಪೂರ್ಣ ಪರಿಹಾರ ನೀಡುತ್ತದೆ. ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸುವಾಗ ವಾಹನಗಳ ಸಂಪೂರ್ಣ ಮಾಹಿತಿ ಇರುವುದಿಲ್ಲ. ಕೆಲವೊಮ್ಮೆ ಕದ್ದ ವಾಹನಗಳ ಮಾಹಿತಿ ಸಿಗುವುದು ಕಷ್ಟವಾಗುತ್ತದೆ. ಈ ಹಿನ್ನಲೆಯಲ್ಲಿ ಈಗ ಅಭಿವೃದ್ದಿಪಡಿಸಿರುವ ವಾಹನ್ ಸಮನ್ವಯ್ ಆಪ್ ತುಂಬಾ ಉಪಕಾರಿಯಾಗಿದೆ.

    ವಾಹನ್ ಸಮನ್ವಯ್ ಮಾಹಿತಿ ಸಂಗ್ರಹಣೆ

    ರಾಷ್ಟ್ರೀಯ ಅಪರಾಧಿ ದಾಖಲೆಗಳ ವಿಭಾಗ, ಪೊಲೀಸ್ ಹಾಗೂ ಟ್ರಾಫಿಕ್ ಪೊಲೀಸ ಠಾಣೆಗಳಿಗೆ ಪ್ರತ್ಯೇಕ ವಾಹನ್ ಸಮನ್ವಯ್ ಸೈನ್ ಇನ್ ಐಡಿ ಹಾಗೂ ಪಾಸವರ್ಡ್ ಗಳನ್ನು ನೀಡಲಾಗಿರುತ್ತದೆ. ಯಾವುದೇ ಸಂದರ್ಭದಲ್ಲಿ ವಾಹನ ಕಳವಾದಾಗ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಸಂದರ್ಭ ಪೊಲೀಸ್ ಸಿಬ್ಬಂದಿ ವಾಹನದ ಸಂಪೂರ್ಣ ಮಾಹಿತಿ ಯನ್ನು ವಾಹನ್ ಸಮನ್ವಯ್ ಗೆ ದಾಖಲಿಸುತ್ತಾರೆ.

    ಇದರಿಂದಾಗಿ ಯಾವುದೇ ಕಳುವಾದ ವಾಹನದ ಮಾಹಿತಿ ವಾಹನ್ ಸಮನ್ವಯ್ ಆಪ್ ನಲ್ಲಿ ಸಿಗಲಿದೆ. ವಾಹನ್ ಸಮನ್ವಯ್ ಆಪ್ ನಲ್ಲಿ ಈ ರೀತಿ ಮಾಹಿತಿ ದಾಖಲಿಸುವುದರಿಂದ ದೇಶದ ಯಾವುದೇ ಮೂಲೆಯಲ್ಲಿ ಕಳುವಾದ ವಾಹನ ಬೆರೆ ಎಲ್ಲೋ ಇನ್ನೊಬ್ಬರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ವಾಹನ್ ಸಮನ್ವಯ್ ಆಪ್ ನಲ್ಲಿ ಗಾಡಿಯ ಮಾಹಿತಿಯನ್ನು ನಮೂದಿಸಿ ವಾಹನದ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
    ಕದ್ದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡ ಸಂದರ್ಭದಲ್ಲಿಯೂ ವಾಹನದ ಮಾಹಿತಿಯನ್ನು ಪೊಲೀಸರು ವಾಹನ್ ಸಮನ್ವಯ್ ಗೆ ದಾಖಲಿಸುತ್ತಾರೆ. ಈ ಆಪ್ 3 ವರ್ಷಗಳ ಹಿಂದೆಯ ಚಾಲ್ತಿಯಲ್ಲಿದ್ದು ಈಗ ಹೊಸ ರೂಪದೊಂದಿಗೆ ಮತ್ತೆ ಪ್ರಚಲಿತದಲ್ಲಿದೆ.

    ಬಳಕೆ ಹೇಗೆ

    ಗೂಗಲ್ ಪ್ಲೇ ಸ್ಟೋರ್ ನಲ್ಲಿ ವಾಹನ್ ಸಮನ್ವಯ್  (Vahan Samanvay) ಎಂದು ಟೈಪ್ ಮಾಡಿ APP ನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬೇಕು. ನಂತರ ವಾಹನ್ ಸಮನ್ವಯ್ ದಲ್ಲಿ ಚೆಕ್ ಯುವರ್ ವೆಹಿಕಲ್ ಸ್ಟೆಟಸ್ ಕ್ಸಿಕ್ ಮಾಡಬೇಕು. ನಂತರ  ಹೆಸರು, ವೆಹಿಕಲ್ ನೊಂದಣಿ ಸಂಖ್ಯೆ, ಚಾಸಿಸ್ ಸಂಖ್ಯೆ, ಇಂಜಿನ್ ನಂಬರ್ ನ್ನು ದಾಖಲಿಸಬೇಕು ನಂತರ ನಿಮಗೆ ವಾಹನ ಸಂಪೂರ್ಣ ಮಾಹಿತಿ ಸಿಗುತ್ತೆ. ಆಂಡ್ರಾಯಿಡ್ ಹಾಗೂ ಐಓಎಸ್ ವರ್ಶನ್ ಕೂಡ ದೊರೆಯುತ್ತದೆ.

     

     

     

     

     

     

     

     

     

     

    Share Information
    Advertisement
    Click to comment

    You must be logged in to post a comment Login

    Leave a Reply