ಬೆಳೆ ಸಮೀಕ್ಷೆ ಅಳವಡಿಸಲು ರೈತರಿಗೆ ಮೊಬೈಲ್ ಆ್ಯಪ್

ಉಡುಪಿ, ನವೆಂಬರ್ 5 : ರಾಜ್ಯ ಸರ್ಕಾರವು, ರಾಜ್ಯದ ರೈತರ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಾಕೃತಿಕ ವಿಕೋಪ ಹಾಗೂ ಇನ್ನಿತರೆ ಸಮಯದಲ್ಲಿ ಬೆಳೆ ಹಾನಿಗೆ ಒಳಗಾಗುವ ರೈತರಿಗೆ, ಕನಿಷ್ಠ ಸಮಯದಲ್ಲಿ, ಗರಿಷ್ಠ ನೆರವು ನೀಡುವ ಉದ್ದೇಶದಿಂದ ರಾಜ್ಯಾದ್ಯಂತ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆಯನ್ನು ನಡೆಸುತ್ತಿದ್ದು, ಸಮಯಮಿತಿಯೊಳಗೆ ಈ ಸಮೀಕ್ಷಾ ಕಾರ್ಯ ಮುಗಿಯ ಬೇಕಾಗಿರುವುದರಿಂದ, ಪ್ರಸ್ತುತ ರೈತರೇ ನೇರವಾಗಿ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ದಾಖಲಿಸಲು ಅವಕಾಶ ಕಲ್ಪಿಸಿದೆ.

ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ವಿನೂತನ ಮೊಬೈಲ್ ಆ್ಯಪ್ ಮುಖಾಂತರ ಬೆಳೆ ದಾಖಲಿಸುವ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಗ್ರಾಮ ಕರಣಿಕರು ಈ ಕಾರ್ಯದಲ್ಲಿ ತೊಡಗಿದ್ದು, ಇದುವರೆವಿಗೂ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ನಡೆದಿಲ್ಲವಾದ್ದರಿಂದ, ಜಿಲ್ಲೆಯ ರೈತರೇ ನೇರವಾಗಿ ತಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ದಾಖಲಿಸಲು ಸರ್ಕಾರ ಆಪ್ ಬಿಡುಗಡೆ ಮಾಡಿದ್ದು, ಇದನ್ನು ಬಳಸಿಕೊಂಡು ರೈತರೂ ಸಹ ತಮ್ಮ ಜಮೀನಿನ ಬೆಳೆ ಸಮೀಕ್ಷೆ ಕೈಗೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಅಂಡ್ರಾಯ್ಡ್ ಸೌಲಭ್ಯ ಇರುವ ಮೊಬೈಲ್ ನ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಬೆಳೆ ಸಮೀಕ್ಷೆ- Karnataka Farmer’s Cop Survey App ಎಂದು ಚೆಕ್ ಮಾಡಿದಾಗ, ಅಲ್ಲಿ ಇರುವ ಬೆಳೆ ಸಮೀಕ್ಷೆ ಎಂಬ ಅಪ್ಲಿಕೇಷನ್ ಇನ್‍ಸ್ಟಾಲ್ ಮಾಡಿಕೊಂಡು, ಅಲ್ಲಿ ಬಳಕೆದಾರರ ಹೆಸರು, ಮೊಬೈಲ್, ಆಧಾರ್ ಸಂಖ್ಯೆ ನೀಡಿ, OTP ಪಡೆಯಬೇಕು, ನಂತರ ವರ್ಷ, ಮುಂಗಾರು ಋತು ಆಯ್ಕೆ ಮಾಡಿಕೊಂಡು, ನಂತರ ಅಪ್ಲಿಕೇಷನ್ ನಲ್ಲಿ ಇರುವ ಮಾಹಿತಿಯನ್ನು ದಾಖಲಿಸಿ, ತಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ಮಾಡಿಕೊಳ್ಳಬಹುದಾಗಿದ್ದು,

ಅತ್ಯಂತ ಸುಲಭವಾಗಿರುವ ಈ ಆಪ್ ಎಲ್ಲ ರೈತರೂ ಸುಲಭವಾಗಿ ಬಳಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 9,91,895 ಪ್ಲಾಟ್ಸ್ (ರೈತರ ಜಮೀನು) ಇದ್ದು, ಗ್ರಾಮ ಕರಣಿಕರು ಈಗಾಗಲೇ ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದು, ಇವರೊಂದಿಗೆ ರೈತರು ಆಸಕ್ತಿ ವಹಿಸಿ ತಮ್ಮ ಜಮೀನಿನ ಬೆಳೆ ಸಮೀಕ್ಷೆ ಯನ್ನು ಮೊಬೈಲ್ ಆಪ್ ಬಳಿಸಿ ದಾಖಲಿಸುವಂತೆ ಹಾಗೂ ಮೊಬೈಲ್ ಆಪ್ ಮೂಲಕ ಬೆಳೆಗಳನ್ನು ದಾಖಲಿಸುವುದರಿಂದ , ಪ್ರತಿಯೊಬ್ಬ ರೈತನೂ ಬೆಳೆಯಲಾದ ಬೆಳೆಗಳ ವಿವರ ಕ್ಷೇತ್ರದ ಜತೆಗೆ ನೀರಾವರಿ ಸೇರಿದಂತೆ ಸಂಪೂರ್ಣ ವರದಿ ಸಂಗ್ರಹವಾಗಲಿದ್ದು, ಪ್ರಾಕೃತಿಕ ವಿಕೋಪದಂತಹ ಸಂದರ್ಭದಲ್ಲಿ ಫಸಲು ನಷ್ಟದ ನೈಜತೆಯನ್ನಾಧಿರಿಸಿ ರೈತಾಪಿವರ್ಗದ ಜನರಿಗೆ ಸಕಾಲಿಕ ಮತ್ತು ನ್ಯಾಯಯುತ ಪರಿಹಾರ ಪಾವತಿ ಶೀಘ್ರವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

4 Shares

Facebook Comments

comments