Connect with us

    FILM

    ಇಸ್ರೇಲ್ ವಿಮಾನ ನಿಲ್ದಾಣ ತಲುಪಿದ ಬಾಲಿವುಡ್ ನಟಿ ನುಶ್ರತ್‌ ಭರುಚಾ

    ಇಸ್ರೇಲ್ ಅಕ್ಟೋಬರ್ 08: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಯುದ್ದದ ನಡುವೆ ಬಾಲಿವುಡ್‌ ನಟಿ ನುಶ್ರತ್‌ ಭರುಚಾ ಇಸ್ರೇಲ್ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಶನಿವಾರದಿಂದ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಯುದ್ಧ ನಡೆಯುತ್ತಿದೆ. ಎರಡು ದೇಶಗಳ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಬಾಲಿವುಡ್ ನಟಿ ನುಶ್ರತ್ ಭರುಚಾ ಇಸ್ರೇಲ್‌ನಲ್ಲಿ ಸಿಲುಕಿಕೊಂಡರು.


    ‘39ನೇ ಹೈಫಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ನುಶ್ರತ್‌ ಇಸ್ರೇಲ್‌ಗೆ ತೆರಳಿದ್ದು, ದುರದೃಷ್ಟವಶಾತ್ ಯುದ್ಧ ಪೀಡಿತ ನೆಲದಲ್ಲಿ ಸಿಲುಕಿಕೊಂಡಿದ್ದಾರೆ. ನಮ್ಮ ಸಂಪರ್ಕಕ್ಕೂ ಸಿಗುತ್ತಿಲ್ಲ’ ಎಂದು ಅವರ ತಂಡದ ಸದಸ್ಯರೊಬ್ಬರು ಹೇಳಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.


    ಈ ಸುದ್ದಿ ಹೊರಬಂದ ನಂತರ, ನಟಿಯ ಅಭಿಮಾನಿಗಳು ತುಂಬಾ ಚಿಂತಿತರಾಗಿದ್ದರು ಮತ್ತು ನುಸ್ರತ್ ಸುರಕ್ಷಿತವಾಗಿ ತಮ್ಮ ದೇಶಕ್ಕೆ ಮರಳಬೇಕೆಂದು ಪ್ರಾರ್ಥಿಸುತ್ತಿದ್ದರು.


    ಆದರೆ ಇದೀಗ ನಟಿಯ ಬಗ್ಗೆ ರಿಲೀಫ್ ಸುದ್ದಿಯೊಂದು ಹೊರಬಿದ್ದಿದೆ. ನುಶ್ರತ್ ಭರುಚಾ ಭಾರತಕ್ಕೆ ಹಿಂದಿರುಗುತ್ತಿದ್ದಾರೆ ಇಸ್ರೇಲ್‌ನಲ್ಲಿ ಸಿಲುಕಿರುವ ನುಸ್ರತ್ ಭರುಚಾ ಅವರನ್ನು ಸಂಪರ್ಕಿಸಲಾಗಿದೆ. ನಟಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ. ಇಸ್ರೇಲ್‌ನಿಂದ ನಿರ್ಗಮಿಸಲು ಆಕೆ ವಿಮಾನ ನಿಲ್ದಾಣವನ್ನು ತಲುಪಿದ್ದಾಳೆ. ನಟಿ ಶೀಘ್ರದಲ್ಲೇ ದೇಶಕ್ಕೆ ಮರಳಲಿದ್ದಾರೆ. ಇದು ನುಸ್ರತ್ ಕುಟುಂಬಕ್ಕೆ, ಅಭಿಮಾನಿಗಳಿಗೆ ಮತ್ತು ಇಡೀ ದೇಶಕ್ಕೆ ಒಂದು ರಿಲೀಫ್ ನ್ಯೂಸ್. ನುಸ್ರತ್ ತನ್ನ ದೇಶಕ್ಕೆ ಸುರಕ್ಷಿತವಾಗಿ ಮರಳಲು ಎಲ್ಲರೂ ಕಾಯುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply