LATEST NEWS
ಹಿಂದೂಗಳು ತಲವಾರ್ ಹಿಡಿಯಬೇಕು ಎಂಬ ಹೇಳಿಕೆ ಸಮರ್ಥಿಸಿದ ಅರುಣ್ ಕುಮಾರ್ ಪುತ್ತಿಲ

ಮಂಗಳೂರು ಅಕ್ಟೋಬರ್ 08: ಭಯೋತ್ಪಾದಕರ ರೀತಿಯಲ್ಲಿ ಬದುಕಬೇಕೆಂದು ಮತಾಂಧರು ಯೋಚನೆ ನಡೆಸಿದರೆ ಹಿಂದೂಗಳು ತಲವಾರು ಹಿಡಿಯಬೇಕಾಗುವುದು ಅನಿವಾರ್ಯವಾಗ್ತದೆ. ನಿನ್ನೆ ನಾನು ಶಿವಮೊಗ್ಗದಲ್ಲಿ ಕೊಟ್ಟ ಹೇಳಿಕೆಯನ್ನು ಮತ್ತೆ ಸಮರ್ಥಿಸುತಿದ್ದೇನೆ ಎಂದು ಅರುಣ್ ಪುತ್ತಿಲ ಸ್ಪಷ್ಟಪಡಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ಶಿವಮೊಗ್ಗದಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಿಸಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಶಿವಮೊಗ್ಗದ ರಾಗಿಗುಡ್ಡದಲ್ಲಿ ಪ್ರತಿ ಮನೆಗೂ ಹೋಗಿ ದಾಳಿಗೊಳಗಾದ ಹಿಂದೂಗಳಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದೇನೆ. ಅಲ್ಲಿನ ಮಕ್ಕಳು, ಮಹಿಳೆಯರು ಪಡುತ್ತಿರುವ ವೇದನೆ ಕಣ್ಣೀರು ತರಿಸುತ್ತದೆ. ಶಿಕ್ಷಣ ನೀಡಿದ ಶಿಕ್ಷಕಿಯನ್ನೂ ಬಿಡದೇ ಮತಾಂಧರು ದಾಳಿ ಮಾಡಿದ್ದಾರೆ. ಆ ಪ್ರದೇಶದಲ್ಲಿ ಬದುಕು ನಡೆಸಲು ಹಿಂದೂಗಳು ಭಯಕ್ಕೀಡಾಗಿದ್ದಾರೆ. ಇದೇ ರೀತಿ ಓಲೈಕೆ ನಡೆಸಿದರೆ ಇಂತಹ ಘಟನೆಗಳು ಶಿವಮೊಗ್ಗ ಬಿಟ್ಟು ಬೇರೆ ಕಡೆಯೂ ಪಸರಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
