Connect with us

    FILM

    ಕನ್ನಡ ಬಿಗ್ ಬಾಸ್ ಗೆ ಡ್ರೋನ್ ಪ್ರತಾಪ್ ಎಂಟ್ರಿ….!!

    ಬೆಂಗಳೂರು ಅಕ್ಟೋಬರ್ 08 : ಕನ್ನಡ ಕಿರುತೆರೆಯ ಅತಿದೊಡ್ಡ ಮನರಂಜನೆ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 10ಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಈಗಾಗಲೇ ಬಿಗ್ ಬಾಸ್ ಗೆ ಎಂಟ್ರಿ ಕೊಡುವ ಸ್ಪರ್ಧಿಗಳ ಹೆಸರು ಒಂದೊಂದೇ ಆಗಿ ಹೊರ ಬೀಳಲಾರಂಭಿಸಿದೆ. ಡ್ರೋನ್ ಪ್ರತಾಪ್ ಈ ಬಾರಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿದ್ದಾರೆ.


    ಈಗಾಗಲೇ ಬಿಗ್ ಬಾಸ್ ಸೀಸನ್ 10 ಪ್ರೋಮೋ ಒಂದು ಬಂದಿದ್ದು, ಅದರಲ್ಲಿ ಡ್ರೋನ್ ತಯಾರಿಸುವುದಾಗಿ ಸುಳ್ಳು ಹೇಳಿ ಪ್ರಖ್ಯಾತಿಯಾಗಿದ್ದ ಡ್ರೋನ್ ಪ್ರತಾಪ್ ಇದೀಗ ಬಿಗ್‌ ಬಾಸ್‌ ಮನೆಯೊಳಗೆ ಎಂಟ್ರಿ ಆಗೋದು ಪಕ್ಕಾ ಎನ್ನಲಾಗಿದೆ. ಕಲರ್ಸ್‌ ಜೊತೆಗೆ ಬುಲೆಟ್‌ ಪ್ರಕಾಶ್‌ ಮಗ ರಕ್ಷಕ್‌ ಹಾಗೂ ವರ್ತೂರ್(ಹಳ್ಳಿಕಾರ್) ಕನ್ಪರ್ಮ್ ಆಗಿದೆ.


    ಮೂವರನ್ನು ವೇದಿಕೆ ಮೇಲೆ ಕರೆದು ಮೂವರಲ್ಲಿ ಯಾರು ಹೋಗಬೇಕು ಎನ್ನುವುದನ್ನು ಪ್ರೇಕ್ಷಕರಲ್ಲಿ ವೋಟ್‌ ಮಾಡಲು ಕಿಚ್ಚ ಹೇಳಿದ್ದಾರೆ. ಈ ಮೂವರಲ್ಲಿ ಯಾರು ಮನೆಯೊಳಗೆ ಹೋಗುತ್ತಾರೆ ಎನ್ನುವುದರ ಕುತೂಹಲಕ್ಕೆ ಸಂಜೆ 6 ಬಳಿಕ ತೆರೆ ಬೀಳಲಿದೆ.
    ಕಾಮಿಡಿ ಕಿಲಾಡಿ‌ ಖ್ಯಾತಿಯ ಸಂತೋಷ್, ಕಿರುತೆರೆ ನಟಿ ಭಾಗ್ಯಶ್ರೀ,ನಮೃತಾ ಗೌಡ, ಸ್ನೇಹಿತ್‌ ಗೌಡ, ತನಿಶಾ ಗೌಡ,ವಿನಯ್‌ ಗೌಡ, ನೀತು ವನಜಾಕ್ಷಿ, ಗೌರೀಶ್‌ ಅಕ್ಕಿ, ಇಶಾನಿ, ನಟಿ ಸಂಗೀತ ಶೃಂಗೇರಿ, ಕಾರ್ತಿಕ್‌ ಮಹೇಶ್‌, ಸ್ನೇಕ್‌ ಶ್ಯಾಮ್‌ ಅವರು ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳಾಗಿ ಇರಲಿದ್ದಾರೆ ಎನ್ನಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply