Connect with us

    DAKSHINA KANNADA

    ಶ್ರಮಿಕ ವರ್ಗದ ಅವಹೇಳನ, ಆ್ಯಂಕರ್ ಅನುಶ್ರೀ ಸೇರಿ ‘ಮಹಾನಟಿ’ ತಂಡದ ವಿರುದ್ಧ ದೂರು ದಾಖಲು..!

    ಬೆಂಗಳೂರು : ಕಿರುತೆರೆಯ ಖ್ಯಾತ ನಿರೂಪಕಿ,ತುಳುನಾಡ ಕುವರಿ ಅನುಶ್ರೀ , ರಮೇಶ್​ ಅರವಿಂದ್, ಪ್ರೇಮಾ ಅವರುಗಳ ವಿರುದ್ದ ಪ್ರಕರಣ ದಾಖಲಾಗಿದೆ.

    ಖಾಸಾಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಹಾನಟಿ’ ರಿಯಾಲಿಟಿ ಶೋ ದಲ್ಲಿ ಬಳಕೆ ಆದ ಸಾಲಿನ ಕುರಿತು ಅಪಸ್ವರ ಕೇಳಿ ಬಂದಿದೆ. ಈ ಶೋನಲ್ಲಿ ರಮೇಶ್​ ಅರವಿಂದ್, ಪ್ರೇಮಾ ಮೊದಲಾದವರು ಜಡ್ಜ್ ಸ್ಥಾನದಲ್ಲಿದ್ದರೆ, ಅನುಶ್ರೀ ಅವರು ಆ್ಯಂಕರಿಂಗ್ ಮಾಡುತ್ತಿದ್ದಾರೆ. ಈ ಶೋನಲ್ಲಿ ಸ್ಪರ್ಧಿಯೊಬ್ಬರು ಆ್ಯಕ್ಟಿಂಗ್ ಮಾಡುವಾಗ ಬಳಕೆ ಮಾಡಿದ ಶಬ್ದ ಚರ್ಚೆ ಹುಟ್ಟುಹಾಕಿದೆ. ‘ಮೆಕ್ಯಾನಿಕ್​ನ ಮದುವೆ ಆದರೆ ಗ್ರೀಸ್ ತಿಂದು ಬದುಕಬೇಕಾಗುತ್ತದೆ..’ ಎನ್ನುವ ವಾಕ್ಯ ಬಳಕೆ ಆಗಿದೆ. ಇದು ಮೆಕ್ಯಾನಿಕ್​ ಕೆಲಸ ಮಾಡುವವರ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ. ಚಿಕ್ಕನಾಯಕನಹಳ್ಳಿಯ ಫ್ರೆಂಡ್ಸ್ ದ್ವಿಚಕ್ರವಾಹನ ವರ್ಕ್‌ಶಾಪ್ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ದೂರು ದಾಖಲು ಮಾಡಿದ್ದಾರೆ. ಶ್ರಮಿಕ ವರ್ಗದ ಬಗ್ಗೆ ರಿಯಾಲಿಟಿ ಶೋಗಳಲ್ಲಿ ಈ ರೀತಿಯ ಕುಹಕ ಸರಿ ಅಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ತಕ್ಷಣಕ್ಕೆ ವಾಹಿನಿಯವರು ಕ್ಷಮೆ ಕೇಳಬೇಕು ಎನ್ನುವ ಆಗ್ರಹ ಕೂಡ ಕೇಳಿ ಬಂದಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply