Connect with us

    DAKSHINA KANNADA

    ಬೆಟ್ಟಂಪಾಡಿ: ಅನುಮಾನಾಸ್ಪದವಾಗಿ ಯುವಕನ ಸಾವು-ಕೊಲೆ ಶಂಕೆ ಮೂವರು ಪೊಲೀಸ್ ವಶಕ್ಕೆ

    ಪುತ್ತೂರು ಮೇ 10 : ಬೆಟ್ಟಂಪಾಡಿ ಗ್ರಾಮದ ಬರೆ ಎಂಬಲ್ಲಿ ಯುವಕನೋರ್ವನ ಶವ ಅನುಮಾನಾಸ್ಪದವಾಗಿ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದು, ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಂಪ್ಯ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.


    ಬೆಟ್ಟಂಪಾಡಿ ಬರೆ ದಿ.ಕೊರಗಪ್ಪ ಶೆಟ್ಟಿ ಯವರ ಪುತ್ರ ಚೇತನ್ (33ವ.) ಮೃತಪಟ್ಟವರು. ಮದ್ಯ ವ್ಯಸನಿಯಾಗಿದ್ದ ಚೇತನ್ ಮೇ.9ರಂದು ರಾತ್ರಿ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡಿದ್ದರು. ನಂತರ ನೆರೆಯ ಮನೆಗೆ ಹೋಗಿ ಅಲ್ಲಿಯೂ ಗಲಾಟೆ ಮಾಡಿದ್ದರು. ಬಳಿಕ ಯುವಕನ ಶವ ಪತ್ತೆಯಾಗಿತ್ತು. ಯುವಕನ ಸಾವಿನ ಮೇಲೆ ಅನುಮಾನುಗಳು ಕಂಡು ಬಂದಿದ್ದು ಮೃತದೇಹವನ್ನು ಮಂಗಳೂರು ದೇರಳಕಟ್ಟೆಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕೊಂಡಯ್ಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
    ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ರಿಷ್ಯಂತ್ ಸಿ.ಬಿ. ಘಟನೆ ನಡೆದ ಸ್ಥಳ ಹಾಗೂ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply