DAKSHINA KANNADA
ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ…!
ಮೂಡಬಿದ್ರೆ, ಅಕ್ಟೋಬರ್ 11: ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಕಾರಿನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೂಡಬಿದ್ರೆಯ ಮೂಡು ಕೊಣಾಜೆ ಎಂಬಲ್ಲಿ ಇಂದು ಬೆಳಗ್ಗಿನ ಜಾವಾ ಈ ಘಟನೆ ಸಂಭವಿಸಿದೆ.
ಮಾರುತ್ತಿ ರಿಟ್ಜ್ ಕಾರಿನಲ್ಲಿ 6 ಗೋವುಗಳನ್ನು ತುಂಬಿಕೊಂಡು ಶಿರ್ತಾಡಿ ಕಡೆಯಿಂದ ತುಂಬಿಸಿ ಅಕ್ರಮವಾಗಿ ಮಂಗಳೂರು ಕಡೆಗೆ ಸಾಗಿಸುತ್ತಿದ್ದಾಗ ಮಾಹಿತಿ ಪಡೆದ ಮೂಡಬಿದ್ರೆ ಠಾಣಾಧಿಕಾರಿ ಬಿ.ಎಸ್.ದಿನೇಶ್ ಕುಮಾರ್ ತಂಡದಿಂದ ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದೆ ಪೊಲೀಸ್ ಜೀಪಿಗೆ ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದಾಗ ಕಾರನ್ನು ಚೇಸ್ ಮಾಡಿದ ಪೊಲೀಸರ ತಂಡ ಗುಂಡು ಹಾರಿಸಿದೆ.
ಈ ಸಂದರ್ಭ ಕಾರನಿಂದ ಹಾರಿ ತಪ್ಪಿಸಿಕೊಂಡ ಆರೋಪಿಗಳು ಪರಾರಿಯಾಗಿದ್ದು ರಿಟ್ಜ್ ಕಾರು ಮತ್ತು ಗೋವುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login