Connect with us

    DAKSHINA KANNADA

    ಜೆಡಿಎಸ್‌ ಪಕ್ಷಕ್ಕೆ ಗುಡ್ ಬೈ ಹೇಳಿದ ದಕ್ಷಿಣಕನ್ನಡ ಜಿಲ್ಲೆಯ ಮುಖಂಡರು – ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಗೆ ಬೆಂಬಲ

    ಪುತ್ತೂರು ಎಪ್ರಿಲ್ 24: ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸುತ್ತಿರುವ ಜೆಡಿಎಸ್ ಪಕ್ಷಕ್ಕೆ ಕರಾವಳಿ ಜಿಲ್ಲೆಗಳಲ್ಲಿ ಹೊಡೆತ ಬಿದ್ದಿದ್ದು, ಜಿಲ್ಲೆಯ ಸ್ಥಳೀಯರು ನಾಯಕರು ಸೇರಿದಂತೆ ರಾಜ್ಯ ನಾಯಕರು ಜೆಡಿಎಸ್ ಗೆ ಗುಡ್ ಬೈ ಹೇಳಿದ್ದಾರೆ.


    ಪುತ್ತೂರಿನಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರು ನಾವೆಲ್ಲ ಜೆಡಿಎಸ್ ಪಕ್ಷದ ರಾಷ್ಟ್ರ ಮತ್ತು ರಾಜ್ಯ ಅಧ್ಯಕ್ಷರು ಮಾಧ್ಯಮಕ್ಕೆ ನೀಡುತ್ತಿರುವ ಹೇಳಿಕೆಗಳು ನೋಡುತ್ತಿದ್ದರೆ ಇವರು ಅಧಿಕಾರದ ದಾಹಕ್ಕೆ ಸಿಲುಕಿ ಈ ಪಕ್ಷದ ಜಾತ್ಯಾತೀತ ನಿಲುವನ್ನು ಸಂಪೂರ್ಣ ಮಣ್ಣು ಮಾಡಲಾಗಿದೆ. ಮಾತ್ರವಲ್ಲ ನಮ್ಮಂತ ಜಾತ್ಯತೀತ ನಿಲುವನ್ನು ಹೊಂದಿದವರಿಗೆ ಅಲ್ಲಿ ಉಸಿರೇ ಕಟ್ಟುವ ವಾತಾವರಣ ಸೃಷ್ಟಿಯಾಗಿದೆ. ಈಗ ಜೆಡಿಎಸ್ ಪಕ್ಷ ಕೋಮುವಾದಿ ಪಕ್ಷಗಳ ಜೊತೆ ಸೇರಿ ಅವರನ್ನು ಒಲೈಸಲು ಅಲ್ಪಸಂಖ್ಯಾತರನ್ನು ಸಂಪೂರ್ಣ ಕಡೆಗಣಿಸುತ್ತಿದ್ದಾರೆ.

    ಈ ಪಕ್ಷಕ್ಕಾಗಿ ರಾತ್ರಿ ಹಗಲು ದುಡಿದ ಕಾರ್ಯಕರ್ತರನ್ನು ಕ್ಯಾರೆ ಎನ್ನದೆ ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ. ಈ ನಾಯಕರ ನಡವಳಿಕೆಯಿಂದ ನಮಗೆಲ್ಲರಿಗೂ ಬಹಳಷ್ಟು ನೋವು ತಂದಿದೆ, ಆದ್ದರಿಂದ ಇನ್ನು ಮುಂದೆ ಈ ಜೆಡಿಎಸ್ ಪಕ್ಷದಲ್ಲಿ ಮುಂದುವರಿಯಲು ನಮ್ಮಿಂದ ಸಾಧ್ಯವಿಲ್ಲ. ಆದುದರಿಂದ ಇನ್ನು ಮುಂದೆ ಜಾತ್ಯಾತೀತ ತತ್ವವನ್ನು ಉಳಿಸಿಕೊಂಡಿರುವ ಪಕ್ಷ ನಮ್ಮ ಮುಂದೆ ಇರುವುದು ಕಾಂಗ್ರೆಸ್ ಪಕ್ಷ ಮಾತ್ರ. ಈ ಹಿನ್ನಲೆ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಇವರನ್ನು ಬೆಂಬಲಿಸುವುದು ನಮಗೆ ಅತೀ ಅಗತ್ಯವಾಗಿದೆ. ಆದುದರಿಂದ ಈ ಇಡೀ ಜಿಲ್ಲೆಯಲ್ಲಿ ನಮ್ಮ ಬೆಂಬಲಿಗರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸುವುದೇ ಮುಖ್ಯ ನಮ್ಮ ಗುರಿ. ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಪಕ್ಷ ಈಗ ತೆಗೆದುಕೊಂಡಿರುವ ಬಿಜೆಪಿಯ ಜೊತೆ ಹೊಂದಾಣಿಕೆಯ ನಿಲುವನ್ನು ಖಂಡಿಸಿ ದೂರ ನಿಂತ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ.

    ಜೆಡಿಎಸ್ ನ ಪುತ್ತೂರು ತಾಲೂಕು ಅಧ್ಯಕ್ಷರಾಗಿ ಜಿಲ್ಲಾ ಪತ್ರಿಕಾ ವಕ್ತಾರ ರಾಜ್ಯ ಕಾರ್ಯದರ್ಶಿಯಾಗಿ ಮತ್ತು ನನ್ನ ಮಿತ್ರರೂ ಆದ ಹಾರೂನ್ ರಶೀದ್ ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷರು ಮತ್ತು ಹಕೀಂ ವಾಮಂಜೂರು ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿ ಹಾಗೂ ಪಿ.ಎಂ ಇಬ್ರಾಹಿಂ ಪರಪುಂಜ ತಾಲೂಕು ಉಪಾಧ್ಯಕ್ಷರು, ಮಹ್ಮಮದ್ ಗೋಳಿ ಕಟ್ಟೆ ಅಲ್ಪಸಂಖ್ಯಾತ ಜಿಲ್ಲಾ ಉಪಾಧ್ಯಕ್ಷರು, ಅಲ್ಲದೇ ಸವಾಝ್ ಬಂಟ್ವಾಳ ಜಿಲ್ಲಾ ಯುವ ಕಾರ್ಯದರ್ಶಿ ಸೇರಿದಂತೆ ಕಾರ್ಯಕರ್ತರು ಜೆಡಿಎಸ್ ತೊರೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply