Connect with us

    DAKSHINA KANNADA

    ದ್ವೇಷದ ಕಂದಕಕ್ಕೆ ದೂಡಿದ್ದ ಬಿಜೆಪಿಯಿಂದ ಸಾಮರಸ್ಯದ ತುಳುನಾಡನ್ನು ರಕ್ಷಿಸಲು ಇದು ಕೊನೆಯ ಅವಕಾಶ: ಪದ್ಮರಾಜ್ ರಾಮಯ್ಯ ಪೂಜಾರಿ

    ಮಂಗಳೂರು , ಏಪ್ರಿಲ್ 24: ಸಾಮರಸ್ಯದ ತುಳುನಾಡನ್ನು ದ್ವೇಷದ ಕಂದಕಕ್ಕೆ ದೂಡಿದ್ದು ಬಿಜೆಪಿ ಎಂದು ದಕ್ಷಿಣ ಕನ್ನಡ ಲೋಕಾಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿ ಹೇಳಿದ್ದಾರೆ.

    ನಗರದ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪದ್ಮರಾಜ್ , ನಾನು ಮೊದಲ ಬಾರಿ ಚುನಾವಣೆ ಎದುರಿಸುತ್ತಿದ್ದೇನೆ. ಆದ್ರೆ ಕಾರ್ಯಕರ್ತರು ನಾಯಕರು ಆ ಭಾವನೆ ಬರದಂತೆ ಸಾಥ್ ಕೊಟ್ಟಿದಾರೆ. ಕಾಂಗ್ರೆಸ್ ಪಕ್ಷ ದ್ವೇಷ ಹಂಚಿಲ್ಲ, ಕಾರ್ಯಕರ್ತರು ಮನೆ ಮನೆಗೆ ಹೋಗಿ ಒಳ್ಳೆಯ ಕೆಲಸ ಮಾಡಿದ್ದಾರೆ.

    33 ವರ್ಷಗಳಿಂದ ಸೋಲು ಅಂತ ಒಪ್ಪುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ, ಸೋಲಿನ ಸರಪಣಿಯಿಂದ ಹೊರಬಂದು ಕಾಂಗ್ರೆಸ್ ವಿಜಯ ಸಾಧಿಸಲಿದೆ. ಮಂಗಳೂರಿನಲ್ಲಿ 33 ವರ್ಷಗಳಿಂದ ಅಭಿವೃದ್ಧಿ ಕೆಲಸ ಮಾಡಿಯೇ ಇಲ್ಲ. ಸಾಮರಸ್ಯದ ತುಳುನಾಡನ್ನು 1991 ರಲ್ಲಿ ದ್ವೇಷದ ಕಂದಕಕ್ಕೆ ಬಿಜೆಪಿ ದೂಡಿತ್ತು. ಬಿಜೆಪಿಯ ಹಿಂದುತ್ವ ಧರ್ಮದ ಅಮಲೇರಿದ ಸ್ಥಿತಿಯಲ್ಲಿದೆ. ಕೋಮು ಗಲಭೆ ಆಗುತ್ತಿದ್ದುದರಿಂದ ಕೋಮು ಸೂಕ್ಷ್ಮ ಜಾಗವೆಂಬ ಟ್ಯಾಗ್ ಲೈನ್ ಬಿದ್ದಿದೆ. ನಮ್ಮಲ್ಲಿ ಉದ್ಯೋಗ ಸಿಗದೆ ಮಕ್ಕಳು ವಿದೇಶಕ್ಕೆ ಹೋಗುವ ಸ್ಥಿತಿಯಿದೆ. ಮಂಗಳೂರು ನಗರ ಅಭಿವೃದ್ಧಿಯಾಗಲು ತುಂಬ ಅವಕಾಶ ಇದೆ. ಕಂಬಳ, ಸಂಸ್ಕೃತಿ ಹೆಸರಿನಲ್ಲಿ ಟೂರಿಸಂ ಬೆಳೆಯಲು ಅವಕಾಶ ಇದೆ. ಮುಂಬೈನಂತೆ ಬೆಳೆಯಲು ಮಂಗಳೂರಿಗೂ ಎಲ್ಲ ಅವಕಾಶ ಇದೆ. ಮುಂಬೈ ನಗರ 20 ಗಂಟೆ ಹೇಗೆ ತೆರೆದಿರುತ್ತದೋ ಅದೇ ಸ್ಥಿತಿ ತರಬೇಕಾಗಿದೆ. ಹಿಂದಿನ ರೀತಿಯಲ್ಲೇ ಸಾಮರಸ್ಯದ ಊರಾಗಿಸುವ ಕೆಲಸ ಆಗಬೇಕಾಗಿದೆ.ಜಗತ್ತು ಭಾರತವನ್ನು ಹೆಚ್ಚು ಗೌರವಿಸುವುದು ನಮ್ಮ ಶ್ರೇಷ್ಠ ಸಂವಿಧಾನಕ್ಕಾಗಿ. ಐದು ಗ್ಯಾರಂಟಿ ಯೋಜನೆ ಕೊಟ್ಟಿದ್ದು ಕಾಂಗ್ರೆಸ್, ಬಿಜೆಪಿ ಮಾಡಿದ ಸಾಧನೆ ಶೂನ್ಯ. ಈ ಚುನಾವಣೆ ದೇಶದ್ರೋಹಿ ಮತ್ತು ದೇಶಪ್ರೇಮಿಗಳ ಚುನಾವಣೆ ಎಂದು ಹೇಳುತ್ತಾರೆ. ಇಲ್ಲಿನ ಸಂಸದರಿಗೆ ಒಂದು ಹೈವೇ ಮಾಡಲು ಆಗಿಲ್ಲ, ಕಾಸರಗೋಡು ಜಿಲ್ಲೆಯ ಹೈವೇ ಹೇಗಿದೆ ಅಂತ ನೋಡಿಕೊಂಡು ಬನ್ನಿ. ಪದ್ಮರಾಜ್ ಜಾತಿಯವನೇ ಅಲ್ಲ ಎಂದು ಪ್ರಶ್ನಿಸಲು ಮುಂದಾಗಿದ್ದರು. ಅದಕ್ಕಾಗಿ ಹೆಸರು ಬದಲಾವಣೆ ಮಾಡಬೇಕಾಗಿ ಬಂತು. ಇನ್ನೊಬ್ಬರ ಕಣ್ಣೊರೆಸುವ ಹಿಂದು ಧರ್ಮ ನನಗೆ ಜ್ಞಾನ ಕೊಟ್ಟಿದೆ ಎಂದು ಮಂಗಳೂರಿನಲ್ಲಿ ಲೋಕಾಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply