Connect with us

    DAKSHINA KANNADA

    ಸಾವಿನಲ್ಲೂ ಅಣ್ಣನ ಜೊತೆಗೆ ಹೊರಟ ತಮ್ಮ – ಕೆಲವೇ ಗಂಟೆಗಳಲ್ಲಿ ಸಹೋದರರಿಬ್ಬರ ನಿಧನ

    ಸುಳ್ಯ ಎಪ್ರಿಲ್ 30: ಅಣ್ಣ ನಿಧನರಾದ ಕೆಲವೇ ಗಂಟೆಗಳಲ್ಲಿ ತಮ್ಮನೂ ಇಹಲೋಕ ತ್ಯಜಿಸಿದ ಘಟನೆ ಅರಂತೋಡಿನಲ್ಲಿ ನಡೆದಿದೆ. ಅರಂತೋಡು ಗ್ರಾಮದ ನಿವಾಸಿ ಹಾಜಿ ಎಸ್.ಇ. ಅಬ್ದುಲ್ಲ ಅವರು (82) ಹಾಗೂ ಸಹೋದರ ಹಾಜಿ. ಎಸ್.ಇ. ಮಹಮ್ಮದ್ (76) ಮೃತರು.


    ಅಬ್ದುಲ್ಲ ಅವರು ಅಸೌಖ್ಯದಿಂದ ಮುಂಜಾನೆ ನಿಧನರಾದರು. ಈ ವಿಷಯ ತಿಳಿಯುತಿದ್ದಂತೆ ಅಬ್ದುಲ್ಲ ಅವರ ತಮ್ಮ ಮಹಮ್ಮದ್ ಕೂಡ ಅಸ್ವಸ್ಥರಾಗಿ ಕುಸಿದು ಬಿದ್ದರು. ಇವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ ನಿಧನರಾದರು. ಕೆಲವೇ ಸಮಯದ ಅಂತರದಲ್ಲಿ ಸಹೋದರರಿಬ್ಬರು ನಿಧನರಾದುದು ಕುಟುಂಬಕ್ಕೆ ಆಘಾತ ಉಂಟು ಮಾಡಿದೆ. ಮೃತ ಅಬ್ದುಲ್ಲ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಮಹಮ್ಮದ್ ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply