Connect with us

    BELTHANGADI

    ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿ, ಚಿಕ್ಕಮ್ಮನ ಮೇಲೆ ಅ್ಯಸಿಡ್ ದಾಳಿ…!

    ನೆಲ್ಯಾಡಿ, ಅಕ್ಟೋಬರ್ 10: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯು ತನ್ನ ಪತ್ನಿ ಹಾಗೂ ಆಕೆಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿ ಸೆ.೨೪ರಂದು ಮುಂಜಾನೆ ನಡೆದಿತ್ತು. ಇದರಲ್ಲಿ ಶೈನಿ ಎಂಬವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತರಾಗಿದ್ದಾರೆ.

    ನೆಲ್ಯಾಡಿ ನಿವಾಸಿ ಬಿಜು(38ವ.)ಎಂಬಾತ ತನ್ನ ಪತ್ನಿ ಶೈನಿ(33ವ.)ಹಾಗೂ ಪತ್ನಿಯ ಚಿಕ್ಕಮ್ಮ ಝಾನ್ಸಿ(36ವ.)ಎಂಬವರ ಮೇಲೆ ಆಸಿಡ್ ದಾಳಿ ನಡೆಸಿದ್ದ. ಆಸಿಡ್ ದಾಳಿಯಿಂದಾಗಿ ಇಬ್ಬರ ಮುಖ, ಕಣ್ಣಿನ ಭಾಗ ಸುಟ್ಟುಹೋಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಇದರಲ್ಲಿ ಝಾನ್ಸಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು,ಗಂಭೀರ ಗಾಯಗೊಂಡಿದ್ದ ಶೈನಿ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಬಗ್ಗೆವರದಿಯಾಗಿದೆ.

    ಘಟನೆಯ ವಿವರ:

    ಬಿಜು ಹಾಗೂ ಆತನ ಪತ್ನಿ ಶೈನಿ ನಡುವೆ ಕೌಟುಂಬಿಕ ಕಲಹ ಏರ್ಪಟಿದ್ದು ಈ ಹಿನ್ನೆಲೆಯಲ್ಲಿ ಶೈನಿ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿರುವ ತನ್ನ ತಂದೆಯ ತಮ್ಮನ ಮನೆಯಲ್ಲಿ ಮಗಳ ಜೊತೆಗೆ ವಾಸವಾಗಿದ್ದರು. ಅಲ್ಲಿಂದ ಶೈನಿಯವರು ತನ್ನ ಚಿಕ್ಕಮ್ಮ ಝಾನ್ಸಿಯವರ ಜೊತೆಗೆ ನೆಲ್ಯಾಡಿಯ ಆಶ್ರಮವೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು.

    ಸೆ24ರಂದು ಬೆಳಿಗ್ಗೆ 6 ಗಂಟೆಯ ವೇಳೆಗೆ ಶೈನಿ ಹಾಗೂ ಝಾನ್ಸಿಯವರು ಮನೆಯಿಂದ ಕೆಲಸಕ್ಕೆ ಹೋಗಲೆಂದು ಕಾಲುದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಕಾದು ಕುಳಿತಿದ್ದ ಆರೋಪಿ ಬಿಜು ಇಬ್ಬರ ಮೇಲೂ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ.ನಂತರದಲ್ಲಿ ಪೋಲೀಸರು ಈತನನ್ನು ಬಂಧಿಸಿದ್ದರು.ಆಸಿಡ್ ದಾಳಿಯಿಂದಾಗಿ ಇಬ್ಬರ ಮುಖ ಹಾಗೂ ದೇಹದಲ್ಲಿ ತೀವ್ರ ಸ್ವರೂಪದ ಸುಟ್ಟ ಗಾಯವಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply