Connect with us

  DAKSHINA KANNADA

  ಪಿ.ಎ ಕಾಲೇಜಿನಲ್ಲಿ ICEST 24 (ಎಂಜಿನಿಯರಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಅಂತರರಾಷ್ಟ್ರೀಯ ಸಮಾವೇಶ 24) ಉದ್ಘಾಟನೆ

  ಮಂಗಳೂರು: ಇಂಜಿನಿಯರಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನ-2024 (ಐಸಿಇಎಸ್ಟಿ-24) ಕುರಿತ ಅಂತರರಾಷ್ಟ್ರೀಯ ಮಟ್ಟದ ಸಮಾವೇಶದ ಉದ್ಘಾಟನೆಯು ಏಪ್ರಿಲ್ 23, 2024 ರಂದು ಬೆಳಿಗ್ಗೆ 9:30 ಕ್ಕೆ ಮಂಗಳೂರಿನ ಪಿ.ಎ. ಕಾಲೇಜ್ ಆಫ್ ಇಂಜಿನಿಯರಿಂಗನಲ್ಲಿ ನಡೆಯಿತು.

  ICEST-24 ಒಟ್ಟು ಆರು ಸಮ್ಮೇಳನಗಳನ್ನು ಒಳಗೊಂಡಿದ್ದು ವಿಭಿನ್ನ ಎಂಜಿನಿಯರಿಂಗ್ ವಿಭಾಗಗಳನ್ನು ಪ್ರತಿನಿಧಿಸುತ್ತದೆ. ಮುಖ್ಯ ಅತಿಥಿಯಾಗಿ ಆಗಮಿಸಿದ , ಮಂಗಳೂರಿನ ಇನ್ಫೋಸಿಸ್ನ ಹಿರಿಯ ಯೋಜನಾ ವ್ಯವಸ್ಥಾಪಕ ಶ್ರೀ ಸೋಹನ್ ಎಂ. ಅವರು ಮಾತನಾಡಿ ತಾಂತ್ರಿಕ ಶಿಕ್ಷಣದ ಪ್ರಗತಿಯಲ್ಲಿ ಬಹುಶಿಸ್ತೀಯ ವಿಧಾನಗಳ ಪ್ರಾಮುಖ್ಯತೆಯನ್ನು ವಿವರಿಸಿದರು. ಮುಖ್ಯ ಭಾಷಣ ಮಾಡಿದ ವಿಗ್ನಾನ್ (Vignan’s) ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಡಾ. ಪಿ. ನಾಗಭೂಷಣ್ ಅವರು ಮಾತನಾಡಿ ಪ್ರಸಕ್ತ ಸನಿವೇಶದಲ್ಲಿ ಕೃತಕ ಬುದ್ಧಿಮತ್ತೆಯ ಮಹತ್ವವನ್ನು ಚರ್ಚಿಸಿದರು ಮತ್ತು ಸ್ಮಾರ್ಟ್ ಯುಗದಲ್ಲಿ ಕಂಪ್ಯೂಟರ್, ಕೃತಕ ಬುದ್ಧಿಮತ್ತೆ ಜ್ಞಾನದ ಜೊತೆಗೆ ಇತರ ವಿಷಯದ ಜ್ಞಾನ ಅಗತ್ಯ ಎಂದರು.

  ಶ್ರೀ ಅಬ್ದುಲ್ಲಾ ಇಬ್ರಾಹಿಂ, ಮ್ಯಾನೇಜಿಂಗ್ ಟ್ರಸ್ಟಿ ಪಿ.ಎ. ಸಮೂಹ ಸಂಸ್ಥೆಗಳು ಮಂಗಳೂರು ಇವರು ಮಾತನಾಡಿ ಸಂಶೋಧನೆ ಮತ್ತು ಅದರ ಪ್ರಭಾವದ ಬಗ್ಗೆ ಮಾತನಾಡಿದರು, ಪಿ.ಎ ಕಾಲೇಜಿನಲ್ಲಿನ ವಿವಿಧ ಸಂಶೋಧನಾ ಕೇಂದ್ರಗಳ ಸಂಶೋಧನೆಗೆ ಪೂರಕ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

  ಗೌರವ ಅತಿಥಿಗಳಾದ ಪಿ.ಎ. ಕಾಲೇಜ್ ಆಫ್ ಫಾರ್ಮಸಿ ಇದರ ಪ್ರಾಂಶುಪಾಲರಾದ ಡಾ. ಸಲೀಮುಲ್ಲಾ ಖಾನ್ ಮತ್ತು ಪಿ.ಎ ಪಾಲಿಟೆಕ್ ನ ಪ್ರಾಂಶುಪಾಲರಾದ ಡಾ. ಕೆ.ಪಿ. ಸೂಫಿ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು. ICEST-24 ನ ಜನರಲ್ ಚೇರ್ ಮತ್ತು ಪಿ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲರಾದ ಡಾ. ರಮಿಸ್ ಎಂ.ಕೆ ಅವರು ಅಧ್ಯಕ್ಷತೆ ವಹಿಸಿದ್ದರು.

  ಪಿ.ಎ ಸಮೂಹ ಸಂಸ್ಥೆಗಳ ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ. ಸಯ್ಯದ್ ಅಮೀನ್ ಅಹ್ಮದ್, ಮತ್ತು ಶ್ರೀ ಹ್ಯಾರಿಸ್ ಟಿ.ಡಿ,ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಇತರೆ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
  ವಿದ್ಯಾರ್ಥಿ ಅಬ್ದುಲ್ ಅಬ್ದು ಸಮದ್ ಪ್ರಾರ್ಥಿಸಿದರು, ICEST-24 ರ ಸಂಯೋಜಕ ಡಾ. ಶರೀಫ್ರಾಜು ಜೆ. ಉಕ್ಕುಂದ್ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಡಾ. ಶರ್ಮಿಳಾ ಕುಮಾರಿ ಪ್ರಸ್ತಾವಿಕ ಭಾಷಣ ಮಾಡಿದರು. ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಕೃಷ್ಣ ಪ್ರಸಾದ್ ಎನ್ ಧನ್ಯವಾದ ಅರ್ಪಿಸಿದರು.

  Share Information
  Advertisement
  Click to comment

  You must be logged in to post a comment Login

  Leave a Reply