Connect with us

    LATEST NEWS

    ಕಸ ಎಸೆದವರಿಗೆ ತಕ್ಕ ಪಾಠ ಕಲಿಸಿದ ಮಂಗಳೂರಿನ ಯುವಕ

    ಕಸ ಎಸೆದವರಿಗೆ ತಕ್ಕ ಪಾಠ ಕಲಿಸಿದ ಮಂಗಳೂರಿನ ಯುವಕ

    ಮಂಗಳೂರು ಜನವರಿ 2: ಸ್ವಚ್ಚ ಭಾರತ್ ಅಭಿಯಾನದಲ್ಲಿ ಸ್ವಚ್ಚಗೊಳಿಸಿದ ಸ್ಥಳದಲ್ಲಿ ಮತ್ತೆ ಕಸ ಎಸೆದ ಅಂಗಡಿಯವರಿಗೆ ತಕ್ಕ ಪಾಠವನ್ನು ಮಂಗಳೂರಿನ ಯುವಕನೊಬ್ಬ ಕಲಿಸಿದ್ದಾನೆ. ಎಸೆದ ಕಸವನ್ನು ಮತ್ತೆ ಅವರ ಅಂಗಡಿಗೆ ಸುರಿದು ಸ್ವಚ್ಚತೆಯ ಜಾಗೃತಿ ಮೂಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಡಿಸೆಂಬರ್ 31 ರ ಭಾನುವಾರ ರಾಮಕೃಷ್ಣ ಮಠದ ಆಶ್ರಯದಲ್ಲಿ ಮಂಗಳೂರಿನ ಕರಂಗಲ್ಪಾಡಿ , ಬಂಟ್ಸ್ ಹಾಸ್ಟೆಲ್ ನ ಸುತ್ತಮುತ್ತ ಸ್ವಚ್ಚ ಭಾರತ್ ಅಭಿಯಾನ ನಡೆಸಲಾಗಿತ್ತು. ಕಸ ರಾಶಿ ಹಾಕುತ್ತಿದ್ದ ಸ್ಥಳ ಸ್ವಚ್ಚಗೊಳಿಸಿದ ಕಾರ್ಯಕರ್ತರು ಗಿಡ ನೆಟ್ಟು ಬಂದಿದ್ದರು. ಈ ಅಭಿಯಾನದಲ್ಲಿ ಸಾಮಾಜಿಕ ಕಾರ್ಯಕರ್ತ ಸೌರಜ್ ಕೂಡ ಪಾಲ್ಗೊಂಡಿದ್ದರು.

    ಈ ನಡುವೆ ಸ್ವಚ್ಚಗೊಳಿಸಿದ ಜಾಗದಲ್ಲಿ ಮತ್ತೆ ಸ್ಥಳೀಯ ಅಂಗಡಿಯವರು ಕಸವನ್ನು ಸುರಿದಿದ್ದಾರೆ. ಇದನ್ನು ನೋಡಿದ ಸೌರಜ್ ಅಲ್ಲಿರುವ ಕಸವನ್ನು ಒಟ್ಟು ಹಾಕಿ ಕಸದಲ್ಲಿರುವ ಬಿಲ್ ನ್ನು ಹುಡುಕಿ ವಿಳಾಸವನ್ನು ಪತ್ತೆ ಹಚ್ಚಿ ಅವರ ಅಂಗಡಿಯವರ ಕಸವನ್ನು ಮತ್ತೆ ಅವರಿಗೆ ಹಿಂದಿರುಗಿಸಿ ವಿನೂತನವಾಗಿ ಪ್ರತಿಭಟಿನೆ ಸಲ್ಲಿಸಿದ್ದಾರೆ. ಇನ್ನು ಮುಂದೆ ಹೀಗೆ ಮಾಡಬೇಡಿ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

    ಮಂಗಳೂರು ಮಹಾನಗರಪಾಲಿಕೆಯಲ್ಲಿ ಮನೆ ಮನೆ ಕಸ ಸಂಗ್ರಹ ವ್ಯವಸ್ಥೆ ಇದ್ದರೂ ಕೂಡ ಕೆಲವು ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುತ್ತಿರುವುದು ಕಂಡು ಬರುತ್ತಿದೆ. ಸ್ವಚ್ಚ ಭಾರತ್ ಅಭಿಯಾನದಲ್ಲಿ ದೇಶದ ಯುವಜನತೆ ಸ್ವಚ್ಚತೆ ಪಾಠವನ್ನು ಜನರಿಗೆ ತಿಳಿಸಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಸ್ವಚ್ಚ ಮಾಡಿದ ಸ್ಥಳದಲ್ಲಿ ಮತ್ತೆ ಕಸವನ್ನು ಹಾಕುವುದರ ಮೂಲಕ ಸ್ವಚ್ಚ ಭಾರತ್ ಅಭಿಯಾನಕ್ಕೆ ವಿಫಲಗೊಳಿಸಲು ಯತ್ನಿಸುತ್ತಿರುವವರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.

    ಸಾಮಾಜಿಕ ಕಾರ್ಯಕರ್ತರ ಸೌರಜ್ ಅವರ ಈ ಸಮಾಜಸೇವೆಗೆ ಎಲ್ಲೆಡೆಯಿಂದ ಉತ್ತರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು. ಅಂಗಡಿಗ ಅವರ ಕಸವನ್ನು ಸುರಿದ ವಿಡಿಯೋ ಈ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply