Connect with us

    LATEST NEWS

    ಲವ್ ಜಿಹಾದ್ ವಿರುದ್ದ ಬೃಹತ್ ಜನಜಾಗೃತಿ ಅಭಿಯಾನ – ವಿಎಚ್ ಪಿ

    ಲವ್ ಜಿಹಾದ್ ವಿರುದ್ದ ಬೃಹತ್ ಜನಜಾಗೃತಿ ಅಭಿಯಾನ – ವಿಎಚ್ ಪಿ

    ಮಂಗಳೂರು ಜನವರಿ 2: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಲವ್ ಜಿಹಾದ್ ವಿರುದ್ದ ಬೃಹತ್ ಜನಜಾಗೃತಿ ಅಭಿಯಾನ ಆರಂಭಿಸುವುದಾಗಿ ವಿಶ್ವಹಿಂದೂ ಪರಿಷತ್ ಬಜರಂಗದಳ ತಿಳಿಸಿದೆ.

    ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್ ನ ಕಾರ್ಯಾಧ್ಯಕ್ಷ ಪ್ರೊ. ಎಂ. ಬಿ ಪುರಾಣಿಕ್ ಲವ್ ಜಿಹಾದ್ ನ ದೊಡ್ಡ ಜಾಲಕ್ಕೆ ದಕ್ಷಿಣಕನ್ನಡ , ಕಾಸರಗೋಡು ಹಾಗೂ ಉಡುಪಿ ಭಾಗದ ಹಿಂದೂ ಯುವತಿಯರು ಬಲಿಯಾಗುತ್ತಿದ್ದಾರೆ ಎಂದು ಕಿಡಿಕಾರಿದರು. ಪ್ರೀತಿ ಪ್ರೇಮ, ಮೋಸ, ಆಮಿಷಗಳ ಬಲೆಗೆ ಸಿಲುಕಿ ಹಲವಾರು ಹೆಣ್ಮಕ್ಕಳು  ಇಸ್ಲಾಂಗೆ ಮತಾಂತರವಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

    ಹಿಂದೂ ಧರ್ಮವನ್ನು ನಾಶ ಮಾಡುವ ವ್ಯವಸ್ಥಿತ ಹುನ್ನಾರ ಇದಾಗಿದ್ದು ಲವ್ ಜಿಹಾದ್ ವಿರುದ್ದ ನಾಳೆಯಿಂದ 15 ದಿನಗಳ ಕಾಲ ಬೃಹತ್ ಜನಜಾಗೃತಿ ಅಭಿಯಾನ ಆರಂಭಿಸುವುದಾಗಿ ಅವರು ತಿಳಿಸಿದರು.

    ಈ ಅಭಿಯಾನ ಭಾಗವಾಗಿ ಗ್ರಾಮಕ್ಕೊಂದು ಸಮಿತಿ ರಚಿಸಲಾಗುವುದೆಂದು ಹೇಳಿದ ಅವರು ಶಾಲಾ, ಕಾಲೇಜು ಸೇರಿದಂತೆ ಮನೆ ಮನೆಗಳಿಗೆ ತೆರಳಿ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಲಾಗುವುದೆಂದು ಅವರು ಸ್ಪಷ್ಟಪಡಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply