Connect with us

    KARNATAKA

    EVM ಸಾಗಿಸುತ್ತಿದ್ದ ವಾಹನದ ಟೈರ್ ಸ್ಪೋಟ: ಬಿಗಿ ಭದ್ರತೆಯಲ್ಲಿ ರಸ್ತೆಯಲ್ಲೇ ರಿಪೇರಿ

    ಕೋಲಾರ: ನಗರದಲ್ಲಿ ಇವಿಎಂ ಸಾಗಿಸುತ್ತಿದ್ದಂತ ವಾಹನವೊಂದು ಟೈಯರ್ ಸ್ಪೋಟಗೊಂಡ ಪರಿಣಾಮ ನಡು ರಸ್ತೆಯಲ್ಲೇ ನಿಲ್ಲುವಂತೆ ಆಗಿದೆ. ಬಳಿಕ ರಸ್ತೆಯಲ್ಲೇ ವಾಹನ ರಿಪೇರಿ ಕಾರ್ಯ ನಡೆಯುತ್ತಿದ್ದು, ಪೊಲೀಸರಿಂದ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.

    ನಿನ್ನೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆದಿದ್ದು.ಮತದಾನದ ಬಳಿಕ ಇವಿಎಂಗಳನ್ನು ಸಂಗ್ರಹಿಸಲಾಗಿತ್ತು. ಇಂತಹ ಇವಿಎಂಗಳನ್ನು ಮುಳುಬಾಗಿಲಿನಿಂದ ಕೋಲಾರದ ಸ್ಟ್ರಾಂಗ್ ರೂಮಿಗೆ ಟ್ರಕ್ ಮೂಲಕ ಸಾಗಿಸೋ ವ್ಯವಸ್ಥೆ ಮಾಡಲಾಗಿತ್ತು.

    ಮುಳುಬಾಗಿಲಿನಿಂದ ಕೋಲಾರಕ್ಕೆ ಟ್ರಕ್ ಮೂಲಕ ಇವಿಎಂ ಸಾಗಿಸುತ್ತಿದ್ದಂತ ಸಂದರ್ಭದಲ್ಲಿ ಕೋಲಾರ ತಾಲೂಕಿನ ವಡಗೂರ್ ಗೇಟ್ ಬಳಿಯಲ್ಲಿ ಟೈಯರ್ ಬ್ಲಾಸ್ಟ್ ಆಗಿ ನಡು ರಸ್ತೆಯಲ್ಲೇ ನಿಲ್ಲುವಂತೆ ಆಗಿದೆ. ಹೀಗಾಗಿ ಸುಮಾರು 1 ಗಂಟೆಗಳ ಕಾಲ ವಾಹನ ರಸ್ತೆಯಲ್ಲೇ ನಿಲ್ಲುವಂತಾಗಿದ್ದು, ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ.

    ಟ್ರಕ್ ಸೀಲ್ ಮಾಡಿರುವುದರಿಂದ ವಾಹನ ರಿಪೇರಿಯಾದ ನಂತ್ರ ಸ್ಟ್ರಾಂಗ್ ರೂಮಿಗೆ ರವಾನೆ ಮಾಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ವಾಹನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸ್ಥಳದಲ್ಲೇ ತಹಶೀಲ್ದಾರ್, ಪೊಲೀಸ್ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply