Connect with us

    LATEST NEWS

    ಅಕ್ರಮ ವಾಸ ಘಾನಾ ಪ್ರಜೆಗೆ 2 ವರ್ಷ ಕಠಿಣ ಜೈಲು ಶಿಕ್ಷೆ

    ಅಕ್ರಮ ವಾಸ ಘಾನಾ ಪ್ರಜೆಗೆ 2 ವರ್ಷ ಕಠಿಣ ಜೈಲು ಶಿಕ್ಷೆ

    ಮಂಗಳೂರು ಜನವರಿ 2: ವೀಸಾ ಅವಧಿ ಮುಗಿದರೂ ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದ ಘಾನಾ ಪ್ರಜೆಗೆ ಎರಡು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

    ಘಾನಾ ಪ್ರಜೆ ಕ್ರಿಸ್ಟೋಫರ್ ವ್ಯಾಪಾರ ವೀಸಾದಲ್ಲಿ ಭಾರತಕ್ಕೆ ಬಂದಿದ್ದ, ಆತನ ವೀಸಾ ಅವಧಿ ಮುಗಿದಿದ್ದರೂ ವೀಸಾ ಪಾಸ್ ಪೋರ್ಟ್ ಷರತ್ತು ಉಲ್ಲಂಘಿಸಿ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ, ಅಲ್ಲದೆ 2017ರ ಜನವರಿ 16 ರಂದು ಮಂಗಳೂರು ನಗರದ ಸೆಂಟ್ ಆಗ್ನೆಸ್ ಕಾಲೇಜಿನ ಬಳಿ ಮಾದಕವಸ್ತು ಕೊಕೇನ್ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದರು. ಬಂಧನ ಸಂದರ್ಭದಲ್ಲಿ ಆತನಿಂದ ಸುಮಾರು 5.50 ಲಕ್ಷ ಬೆಲೆ ಬಾಳು 11.50 ಗ್ರಾಮ ಕೊಕೇನ್ ನ್ನು ವಶಪಡಿಸಿಕೊಳ್ಳಲಾಗಿತ್ತು. ಕದ್ರಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.

    ಪ್ರಕರಣ ವಿಚಾರಣೆ ನಡೆಸಿದ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಎಸ್ ಬೀಳಗಿ ಆರೋಪಿಗೆ ಪಾಸ್ ಪೋರ್ಟ್ ಕಾಯ್ದೆಯಡಿ 6 ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು ಫಾರಿನರ್ಸ್ ಕಾಯ್ದೆಯಡಿ 2 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
    ಶಿಕ್ಷೆ ಮುಗಿದ ನಂತರ ಅಪರಾಧಿಯನ್ನು ಆತನ ಖರ್ಚಿನಲ್ಲೇ ಆತನ ದೇಶಕ್ಕೆ ಗಡಿಪಾರಿಗೆ ನ್ಯಾಯಾಲಯ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply