Connect with us

    FILM

    ಮದುವೆಯಾದ 2 ತಿಂಗಳಲ್ಲೇ ‘ಗುಡ್ ನ್ಯೂಸ್’ ಕೊಟ್ಟ ನಟಿ ಅಮಲಾ ಪೌಲ್…!!

    ಕೇರಳ ಜನವರಿ 04: ಬಹುಭಾಷಾ ನಟಿ ಕನ್ನಡದ ಹೆಬ್ಬುಲಿಯಲ್ಲಿ ಅಭಿನಯಿಸಿದ್ದ ನಟಿ ಅಮಲಾ ಪೌಲ್ ತಮ್ಮ ಎರಡನೇ ಮದುವೆಯಾಗಿ 2 ತಿಂಗಳು ಮುಗಿಯುವದರೊಳಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.


    ಅಮಲಾ ಪೌಲ್‌ ಅವರು ಜಗತ್ ದೇಸಾಯಿ ಜೊತೆಗೆ ಮದುವೆ ಆಗುತ್ತಿರುವ ವಿಚಾರವನ್ನು ಬಹಳ ಗುಟ್ಟಾಗಿ ಇಟ್ಟಿದ್ದರು. ಅಕ್ಟೋಬರ್ 26ರಂದು ಜಗತ್ ದೇಸಾಯಿ ಪ್ರಪೋಸ್ ಮಾಡಿದ ವಿಡಿಯೋವನ್ನು ಹಂಚಿಕೊಂಡಾಗಲೇ, ಈ ಜೋಡಿ ಪ್ರೀತಿಯಲ್ಲಿದೆ ಎಂಬುದು ಗೊತ್ತಾಗಿದ್ದು. ಅದು ನಡೆದು ಒಂದು ವಾರದೊಳಗೆ ಅಮಲಾ & ಜಗತ್ ಮದುವೆ ಆಗಿದ್ದರು. ಆಗಲೂ ಕೂಡ ಯಾರಿಗೂ ಮಾಹಿತಿ ನೀಡಿರಲಿಲ್ಲ. ಮದುವೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗಲೇ ಈ ಬಗ್ಗೆ ಶುಭ ಸುದ್ದಿ ಎಲ್ಲರಿಗೂ ತಿಳಿದಿತ್ತು.

    ಇದೀಗ ಮದುವೆಯಾಗಿ ಎರಡು ತಿಂಗಳಿಗೆ ಸರಿಯಾಗಿ ತಾವು ತಾಯಿ ಆಗುತ್ತಿರುವ ಬಗ್ಗೆ ಅಮಲಾ ಪೌಲ್ ತಿಳಿಸಿದ್ದಾರೆ. ‘1+1=3’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಬ್ಲೆಸ್ಸಿ ನಿರ್ದೇಶನದ ಮತ್ತು ಪೃಥ್ವಿರಾಜ್ ಅಭಿನಯದ ಅಮಲಾ ಅವರ ಮುಂಬರುವ ಚಿತ್ರ ‘ಆಡುಜೀವಿತಂ’ ಬಿಡುಗಡೆಯನ್ನು ಪ್ರೇಕ್ಷಕರು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply